More

    8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

    ನವದೆಹಲಿ: ದೊಡ್ಡ ಟೆಕ್ ಕಂಪನಿಗಳು ಸಾವಿರಗಳ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದು, ಇದೀಗ ಅಂಥ ಪ್ರಕರಣಗಳ ಪೈಕಿ ಒಂದು ದಯನೀಯ ಸಂಗತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಗೂಗಲ್ ತನ್ನ ಉದ್ಯೋಗಿಯೊಬ್ಬರನ್ನು ಗರ್ಭಿಣಿಯೆಂದೂ ನೋಡದೆ, ಒಂದು ವಾರ ಕೂಡ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದೆ.

    ಕ್ಯಾಥರಿನ್ ವೊಂಗ್ ಎಂಬಾಕೆ ತನ್ನ ಈ ಅನುಭವವನ್ನು ಲಿಂಕ್ಡ್​ಇನ್​ನಲ್ಲಿ ಹಂಚಿಕೊಂಡಿದ್ದಾರೆ. ನಾನು ಎಂಟು ತಿಂಗಳ ಗರ್ಭಿಣಿಯಾಗಿದ್ದು, ಹೆರಿಗೆ ರಜೆಗೆ ಇನ್ನೇನು ಒಂದು ವಾರ ಇದ್ದರೂ ನನ್ನನ್ನು ಗೂಗಲ್ ಕಂಪನಿ ಉದ್ಯೋಗದಿಂದ ತೆಗೆದುಹಾಕಿದೆ.

    ಇನ್ನೊಂದು ವಾರ ಕಳೆದರೆ ಪ್ರೋಗ್ರಾಂ ಮ್ಯಾನೇಜರ್ ಆಗಿರುವ ನಾನು ನನ್ನ ಕಾಂಪ್ರಿಹೆನ್ಸಿವ್ ಹ್ಯಾಂಡೋವರ್ ಡಾಕ್ಯುಮೆಂಟ್ ಪೂರ್ಣಗೊಳಿಸಿ ಹೆರಿಗೆ ರಜೆ ಮೇಲೆ ತೆರಳಬಹುದು ಎಂದು ಖುಷಿಯಲ್ಲಿದ್ದೆ. ಆದರೆ ನನ್ನ ಮೊಬೈಲ್​ಫೋನ್​ ನೋಡಿದಾಗ ನನ್ನ ಎದೆ ಧಸಕ್ ಎನ್ನುವಂಥ ಅನುಭವವಾಗಿತ್ತು. ಏಕೆಂದರೆ ಕೆಲಸ ಕಳೆದುಕೊಂಡಿದ್ದ 12 ಸಾವಿರ ಮಂದಿ ಪೈಕಿ ನಾನೂ ಒಬ್ಬಳಾಗಿದ್ದೆ ಎಂದು ಆಕೆ ಹೇಳಿಕೊಂಡಿದ್ದಾರೆ.

    ಆಗ ನನ್ನ ಮನಸಿಗೆ ಬಂದ ಮೊದಲ ಯೋಚನೆ, ‘ಯಾಕೆ ನಾನು? ಯಾಕೆ ಈಗ?’ ಎಂಬ ಪ್ರಶ್ನೆ. ಈ ವಿಷಯ ಜೀರ್ಣಿಸಿಕೊಳ್ಳುವುದು ಕಷ್ಟವಾಗಿತ್ತು. ಏಕೆಂದರೆ, ನನ್ನ ಕಾರ್ಯಕ್ಷಮತೆ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದ ಬಳಿಕವೂ ಹೀಗಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ಅದೂ 34 ವಾರಗಳ ಗರ್ಭಿಣಿಯಾಗಿ ಬೇರೆ ಕಡೆ ಕೆಲಸ ನೋಡಿಕೊಳ್ಳುವಂತೆಯೂ ಇಲ್ಲ ಎಂದು ಆಕೆ ತನ್ನ ಅಸಹಾಯಕತೆನ್ನು ತೋಡಿಕೊಂಡಿದ್ದಾರೆ.

    ನನ್ನ ಹಾಗೂ ಮಗುವಿನ ಬಗ್ಗೆ ಕಾಳಜಿ ತೋರುವವರಿಂದಾಗಿ ಮೆಸೇಜ್​ ಹಾಗೂ ಕರೆಗಳು ಮೇಲಿಂದ ಮೇಲೆ ಬರುತ್ತಿದ್ದವು. ನನ್ನೊಳಗೆ ಇನ್ನೊಂದು ಜೀವ ಇರುವುದರಿಂದ ನಾನು ನಕಾರಾತ್ಮಕ ಯೋಚನೆ ಬರಲು ಬಿಡುತ್ತಿರಲಿಲ್ಲ. ಆದರೂ ಈ ಪರಿಸ್ಥಿತಿಯಿಂದಾಗಿ ನನ್ನ ಕೈ ನಡುಗುವುದನ್ನು ನಿಯಂತ್ರಿಸಿಕೊಳ್ಳಲು ಆಗುತ್ತಿರಲಿಲ್ಲ. ನಾನು ಗೂಗಲ್ ಕಂಪನಿಯನ್ನು ಪ್ರೀತಿಸುತ್ತೇನೆ, ಅದರಲ್ಲೂ ನನ್ನ ಟೀಮ್ ಗೂಗಲ್​ಡೊಮೈನ್ಸ್​ಅನ್ನು ನನ್ನ ಕುಟುಂಬ ಎಂದೇ ಭಾವಿಸುತ್ತೇನೆ ಎಂದೂ ಆಕೆ ಹೇಳಿಕೊಂಡಿದ್ದಾರೆ.

    ನಾನೀಗ ಬೇರೆ ಕಡೆ ಕೆಲಸಕ್ಕೆ ತೆರೆದುಕೊಳ್ಳಬೇಕಿದೆ. ಆದರೆ ನನ್ನ ಗರ್ಭಾವಸ್ಥೆಯ ಈ ಅಂತಿಮ ಹಂತದಲ್ಲಿ ನಾನು ನನ್ನ ಮಗುವಿನ ಬಗ್ಗೆ ಕಾಳಜಿ ತೋರಬೇಕು ಎಂಬುದು ವಾಸ್ತವ. ನನ್ನ ಮಗು ಆರೋಗ್ಯಯುತವಾಗಿ ಈ ಜಗತ್ತಿಗೆ ಪ್ರವೇಶಿಸಲಿದೆ ಎಂದು ಭಾವಿಸುತ್ತೇನೆ. ಎಲ್ಲವೂ ಚೆನ್ನಾಗಿ ಆಗಲಿದೆ, ನಾನು ಅದನ್ನು ಸಾಧಿಸಲಿದ್ದೇನೆ ಎಂಬ ವಿಶ್ವಾಸ ಹೊಂದಿದ್ದೇನೆ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ಗೂಗಲ್ ಅವಧಿಯಲ್ಲಿ ನನಗೆ ಸಿಕ್ಕ ಅವಕಾಶ, ಬೆಳವಣಿಗೆ ಎಲ್ಲದರ ಬಗ್ಗೆಯೂ ನನಗೆ ಮೆಚ್ಚುಗೆ ಇದೆ. ನಾವು ಈ ದಾರಿಯಲ್ಲಿ ಮತ್ತೆ ಸಂಧಿಸುತ್ತೇವೆ ಎಂದುಕೊಳ್ಳೋಣ ಎಂಬುದಾಗಿ ಆಕೆ ಬರೆದುಕೊಂಡಿದ್ದಾಳೆ. ಜೊತೆಗೆ ಮುಂದಿನ ಕೆಲಸ ಮತ್ತು ಅವಕಾಶದ ಬಗ್ಗೆ ಮುಕ್ತವಾಗಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.

    ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

    ಅದೇ ಕೊನೇ ಊಟ, ಕೊನೆಯ ಕೂಟ; ತಹಸೀಲ್ದಾರ್​ ಕಚೇರಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೌಕರನ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts