More

    20 ತಿಂಗಳ ಮಗುವನ್ನೂ ಬಿಡದ ಕಾಮುಕ; ನೆರೆಮನೆಯವನಿಂದಲೇ ಹೀನಕೃತ್ಯ

    ಮುಂಬೈ: ಕಾಮುಕನೊಬ್ಬ 20 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವೊಂದು ನಡೆದಿದೆ. ನೆರೆಮನೆಯ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ಈ ಪ್ರಕರಣ ನಡೆದಿದೆ.

    ಮುಂಬೈನ ವರ್ಲಿಯಲ್ಲಿ ಈ ಪ್ರಕರಣ ನಡೆದಿದ್ದು, 35 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ತನ್ನ 20 ತಿಂಗಳ ಮಗುವನ್ನು ತಾಯಿ ಬಿಟ್ಟು ಸ್ವಲ್ಪ ಆಚೆಗೆ ಹೋಗಿದ್ದಾಗ ಆರೋಪಿ ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದ.

    ಬಳಿಕ ಬಂದ ತಾಯಿ ಅಳುತ್ತಿದ್ದ ಮಗುವನ್ನು ಎಷ್ಟು ಸಮಾಧಾನ ಮಾಡಿದರೂ ಸುಮ್ಮನಿರದಿದ್ದಾಗ ಮಗುವನ್ನು ವೈದ್ಯರಲ್ಲಿಗೆ ಕರೆದೊಯ್ದಿದ್ದಳು. ಆಗ ಮಗುವಿನ ಮೇಲೆ ಅತ್ಯಾಚಾರ ಆಗಿರುವುದಾಗಿ ವೈದ್ಯರು ತಿಳಿಸಿದ್ದರು. ನಂತರ ತಾಯಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

    ಅದೇ ಕೊನೇ ಊಟ, ಕೊನೆಯ ಕೂಟ; ತಹಸೀಲ್ದಾರ್​ ಕಚೇರಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೌಕರನ ಸಾವು

    ದೇವರ ಹುಂಡಿಯಲ್ಲಿ ಸಿಕ್ಕಿತು ವಿಕೃತ ಕೋರಿಕೆಯ ಹರಕೆ ಚೀಟಿ; ನರಳಿ ನರಳಿ ಸಾಯಲಿ ಎಂದು ಬೇಡಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts