ಕಲೆಯಿಂದ ಸದ್ವಿಚಾರ, ಮನಸ್ಸು ವಿಕಾಸ

Gur_Goodness
Published on

ಗುರುಪುರ: ಕಲೆಯಿಂದ ಮನಸ್ಸು ವಿಕಾಸವಾಗುತ್ತದೆ. ಕಲೆಯು ವ್ಯಕ್ತಿಯಲ್ಲಿ ಸದ್ವಿಚಾರ ಹುಟ್ಟು ಹಾಕುತ್ತದೆ. ಸಂಘಗಳ ಬಲವರ್ಧನೆಯಿಂದ ಊರಿಗೆ ಶಕ್ತಿ ಬರುತ್ತದೆ ಎಂದು ಮಂಗಳೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಹೇಳಿದರು.

ಭಾನುವಾರ ಗಂಜಿಮಠ ಗ್ರಾ.ಪಂ. ವ್ಯಾಪ್ತಿಯ ಮೊಗರು ಗ್ರಾಮದ ನಾರಳ ಸಂಕೇಶದ ಕಲಾವರ್ಧಕ ಯುವಕ ಮಂಡಲ ಸುವರ್ಣ ಮಹೋತ್ಸವ ಹಾಗೂ ಮಂಡಲದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಉದ್ಯಮಿ ಎಂ.ಹರಿ ರಾವ್ ದೀಪ ಬೆಳಗಿದರು. ಮಂಡಲದ ಹಿರಿಯ ಸದಸ್ಯ ರಘುನಾಥ ಸಾಮಾನಿ ಬನತ್ತಡಿ ಮಂಡಲದ ನೂತನ ಕಟ್ಟಡ ಉದ್ಘಾಟಿಸಿದರು. ಉದ್ಯಮಿ ಗಣೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಗುರುರಾಜ ನಾರಳ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಗಿರೀಶ್ ಕುಮಾರ್ ಮಾತನಾಡಿದರು.

ವ್ಯಾಪ್ತಿ ಪ್ರದೇಶದ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದ 7 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉದ್ಯಮಿ ಕರುಣಾಕರ ಶೆಟ್ಟಿ ತರೋಳಿ, ಮಂಗಳೂರಿನ ಶಾರದಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ನಾಯ್ಕ, ಜಯಾನಂದ ನಾಯ್ಕ, ಉದ್ಯಮಿ ಶೃತಂಜನ್ ಜೈನ್, ಗಣೇಶ್ ಕೋಟ್ಯಾನ್, ಕಲಾವರ್ಧಕ ಯುವಕ ಮಂಡಲ ಮತ್ತು ಕಲಾಚೇತನ ಯುವತಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು, ಮಂಡಲದ ಸುವರ್ಣ ಮಹೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾಹ್ನವಿ ಪ್ರಾರ್ಥಿಸಿದರು. ಕಲಾವರ್ಧಕ ಯುವಕ ಮಂಡಲ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಆಚಾರ್ಯ ನಾರಳ ಮತ್ತು ಶಿವರಾಜ್ ನಾರಳ ನಿರೂಪಿಸಿದರು. ಮಂಡಲದ ಸದಸ್ಯ ಹೇಮಂತ ಶೆಟ್ಟಿ ವಂದಿಸಿದರು. ಬಳಿಕ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net