More

    ಉತ್ತಮ S*x ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ! ಅನುಪಮಾ ಡೈಲಾಗ್​ ಕೇಳಿ ಬೆರಗಾದ್ರು ಫ್ಯಾನ್ಸ್​

    ಹೈದರಾಬಾದ್​​: ನಟ ಸಿದ್ದು ಜೊನ್ನಲಗಡ್ಡ ಅಭಿನಯದ ಟಾಲಿವುಡ್​ ಸೂಪರ್​​ ಹಿಟ್​ ಸಿನಿಮಾ ಡಿಜಿ ಟಿಲ್ಲು ಸೀಕ್ವೆಲ್​ ‘ಟಿಲ್ಲು ಸ್ಕ್ವೇರ್​’ ಮಾರ್ಚ್​ 29ಕ್ಕೆ ಬಿಡುಗಡೆಯಾಗಲಿದೆ. ಮೊದಲ ಭಾಗ ಸಿಕ್ಕಾಪಟ್ಟೆ ಹಿಟ್​ ಆಗಿದ್ದರಿಂದ ಸಹಜವಾಗಿಯೇ ಎರಡನೇ ಭಾಗದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿ ರಸಿಕರು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದರೋ ಅದೆಲ್ಲವೂ ಟ್ರೈಲರ್​ನಲ್ಲಿ ಇರುವುದರನ್ನು ಕಂಡು ಫುಲ್​​ ಖುಷಿಯಾಗಿದ್ದಾರೆ.

    ನಾಯಕ ಟಿಲ್ಲು ಪರಿಚಯದೊಂದಿಗೆ ಟ್ರೈಲರ್​ ಪ್ರಾರಂಭವಾಗುತ್ತದೆ. ಭಾಗ ಒಂದರಲ್ಲಿ ನೇಹಾ ಶೆಟ್ಟಿ ಮಾಡಿದ್ದ ರಾಧಿಕಾ ಪಾತ್ರವನ್ನು ಎರಡನೇ ಭಾಗದಲ್ಲಿ ಖ್ಯಾತ ನಟಿ ಅನುಪಮಾ ಪರಮೇಶ್ವರನ್​ ಮಾಡಿದ್ದಾರೆ. ಇದುವರೆಗೂ ಸಾಂಪ್ರದಾಯಿಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾ, ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್​ನಲ್ಲೂ ಅದರ ಸುಳಿವು ಇದೆ.

    ಒಳ್ಳೆಯ ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ ಎಂಬ ಅನುಪಮಾ ಅವರ ಡೈಲಾಗ್​ ಟ್ರೈಲರ್​ನ ಪ್ರಮುಖ ಆಕರ್ಷಣೆಯಾಗಿದ್ದು, ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ. ಮೊದಲ ಭಾಗದಂತೆಯೇ, ಎರಡನೇ ಭಾಗವು ಸಹ ಟಿಲ್ಲು ಎದುರಿಸಿದ ಹಾಸ್ಯಮಯ ಸಂಕಷ್ಟಗಳ ಸುತ್ತ ಸುತ್ತುತ್ತದೆ. ಮೊದಲ ಭಾಗದ ಬಹುತೇಕ ಪಾತ್ರಗಳನ್ನೂ ಈ ಭಾಗದಲ್ಲೂ ಉಳಿಸಿಕೊಳ್ಳಲಾಗಿದೆ. ಅನುಪಮಾ ಅವರ ಬೋಲ್ಡ್​ ಅವತಾರ ಮತ್ತು ಸಿದ್ದು ಅವರ ಕಾಮಿಡಿ ಟೈಮಿಂಗ್​ ಮತ್ತು ಮೋಜಿನ ಪಾತ್ರಗಳು ಟ್ರೈಲರ್‌ನ ಮುಖ್ಯ ಹೈಲೈಟ್‌ಗಳಾಗಿವೆ. ಒಟ್ಟಿನಲ್ಲಿ ಇದೊಂದು ಮನರಂಜನೆಯ ಪ್ಯಾಕೇಜ್ ಆಗಿದ್ದು, ಟಿಲ್ಲು ಸ್ಕ್ವೇರ್​ ಟ್ರೈಲರ್​ ಎಲ್ಲೆಡೆ ಟ್ರೆಂಡಿಂಗ್​ನಲ್ಲಿದೆ.

    ಹೊಸ ಅವತಾರದಲ್ಲಿ ಅನುಪಮಾ!
    ಆಲ್ಫೋನ್ಸ್​ ಪುತ್ರೆನ್​ ನಿರ್ದೇಶನದ ಪ್ರೇಮಂ ಸಿನಿಮಾದಲ್ಲಿ ಅನುಪಮಾ ಹೆಸರು ಮೊದಲು ಕೇಳಿಬಂದಿತು. ಮೊದಲ ಚಿತ್ರವೇ ಬ್ಲಾಕ್​ಬಸ್ಟರ್​ ಹಿಟ್​ ಆದರೂ ಕೂಡ ಅವರ ಸಿನಿ ಜರ್ನಿಯಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಾಕಷ್ಟು ಸಿನಿಮಾಗಳು ಫ್ಲಾಪ್​ ಆದವು. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್​ ರಾಜ್​ಕುಮಾರ್​ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ತಮ್ಮ ಸಹಜ ಸೌಂದರ್ಯದಿಂದಲೇ ಅನುಪಮಾ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇದುವರೆಗೂ ಹೆಚ್ಚೇನು ಬೋಲ್ಡ್​ ಪಾತ್ರಗಳಲ್ಲಿ ನಟಿಸದ ಅನುಪಮಾ ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್​ ಆಗಿ ನಟಿಸುವ ಮೂಲಕ ಹೊಸ ಅವತಾರದೊಂದಿಗೆ ರೀಎಂಟ್ರಿ ಕೊಟ್ಟಿದ್ದಾರೆ. ಲಿಪ್​ಲಾಕ್​, ತುಂಡುಡುಗೆ ಹಾಗೂ ಸೆಕ್ಸ್ ಡೈಲಾಗ್​ ಸೇರಿದಂತೆ ಹೊಸ ಪ್ರಯತ್ನಕ್ಕೆ ಅನುಪಮಾ ಕೈಹಾಕಿದ್ದು, ಈ ಬಾರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

    ಅಂದಹಾಗೆ ಟಿಲ್ಲು ಸ್ಕ್ವೇರ್​ ಸಿನಿಮಾ ಮಾರ್ಚ್​ 29ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಮಲಿಕ್​ ರಾಮ್​ ನಿರ್ದೇಶನ ಮಾಡಿದ್ದಾರೆ. ಅನುಪಮಾ ಅವರು ಜಯಂ ರವಿ ನಟನೆಯ ಸೈರೆನ್​ ಸಿನಿಮಾದಲ್ಲಿಯೂ ನಟಿಸಿದ್ದು, ಈ ಚಿತ್ರವು ಸಹ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್​)​

    ದರ್ಶನ್​ ಜತೆಗಿನ ಸಂಬಂಧಕ್ಕೆ ಪವಿತ್ರಾ ಸ್ಪಷ್ಟನೆ ಕೊಟ್ರೆ ಕರಿಮಣಿ ಮಾಲೀಕ ನೀನಲ್ಲ ಅನ್ನೋದಾ!

    6ನೇ ತರಗತಿಯಲ್ಲೇ ಲವ್​ ಲೆಟರ್​! ಶಾಲಾ ವ್ಯಾನ್​ ಬಳಿ ನಡೆದಿದ್ದನ್ನು ಮರೆಯೋಕ್ಕಾಗಲ್ಲ ಎಂದ ಹನಿ ರೋಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts