More

    ಕೋಟಿ ದಾಟಿದ ವೀವ್ಸ್: ವಿಜಯಾನಂದ ಹಾಡಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್

    ಬೆಂಗಳೂರು: ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರ ಪ್ರತಿ ಹಂತದಲ್ಲೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸ್ಟಾರ್​ಕಾಸ್ಟ್, ಫಸ್ಟ್ ಲುಕ್ ಪೋಸ್ಟರ್, ಟೀಸರ್​ಗಳ ಬಳಿಕ ಈಗ ಚಿತ್ರದ ಮೊದಲ ಹಾಡು ಎಲ್ಲೆಡೆ ವೈರಲ್ ಆಗಿದೆ. ಕಳೆದ ಭಾನುವಾರ ‘ಹಾಗೆ ಆದ ಆಲಿಂಗನ…’ ಎಂದು ಸಾಗುವ ರೊಮ್ಯಾಂಟಿಕ್ ಹಾಡು ಬಿಡುಗಡೆ ಮಾಡಲಾಗಿತ್ತು.

    ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ಸಂಯೋಜಿಸಿರುವ ಹಾಡಿಗೆ ಪಂಚಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ನಾಯಕ, ನಾಯಕಿಯ ನಡುವಿನ ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಧನಂಜಯ ರಂಜನ್ ಸಾಹಿತ್ಯ, ಇಮ್ರಾನ್ ಸರ್ದಾರಿಯಾ ಅವರ ನೃತ್ಯನಿರ್ದೇಶನದಲ್ಲಿ ಮೂಡಿಬಂದಿದೆ. ಬೇಲೂರು, ಹಳೇಬೀಡು, ಚಿಕ್ಕಮಗಳೂರು ಸೇರಿದಂತೆ 10ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳನ್ನು ಹಾಡಿನಲ್ಲಿ ಛಾಯಾಗ್ರಾಹಕ ಕೀರ್ತನ್ ಪೂಜಾರಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ.

    ಕೇವಲ ಆರು ದಿನಗಳಲ್ಲಿ ಕನ್ನಡ ಅವತರಣಿಕೆಯ ಹಾಡು ಬರೋಬ್ಬರಿ 28 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಂಡಿದ್ದು, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ತಲಾ 24 ಲಕ್ಷ ವೀವ್ಸ್, ಹಿಂದಿ ಭಾಷೆಯಲ್ಲಿ 22 ಲಕ್ಷ ಹಾಗೂ ಮಲಯಾಳಂನಲ್ಲಿ ಒಂಭತ್ತು ಲಕ್ಷ ಮಂದಿ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಆರು ದಿನಗಳಲ್ಲಿ ಐದು ಭಾಷೆಗಳಿಂದ ಒಂದು ಕೋಟಿ ಮಂದಿ ಹಾಡನ್ನು ವೀಕ್ಷಿಸಿರುವುದು ವಿಶೇಷ.

    ‘ಟ್ರಂಕ್’ ಖ್ಯಾತಿಯ ರಿಷಿಕಾ ಶರ್ಮಾ ನಿರ್ದೇಶಿಸಿರುವ ಈ ಬಯೋಪಿಕ್​ಅನ್ನು ಡಾ. ಆನಂದ ಸಂಕೇಶ್ವರ ವಿಆರ್​ಎಲ್ ಪೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ವಿುಸಿದ್ದಾರೆ.

    ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್ ರಜಪೂತ್, ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಅವರ ಗುರುಗಳ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ. ಇದೇ ತಿಂಗಳ 19ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಡಿ. 9ರಂದು ದೇಶಾದ್ಯಂತ ‘ವಿಜಯಾನಂದ’ ಸಿನಿಮಾ ಬಿಡುಗಡೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts