ಥಾಯ್ಲೆಂಡ್ ಪ್ರವಾಸದಲ್ಲಿ ಮೇಘನಾ; ಸದ್ದು ಮಾಡುತ್ತಿವೆ ಹಾಟ್ ಫೋಟೋಗಳು!

Meghana Raj
Published on

ಬೆಂಗಳೂರು: ನಟಿ ಮೇಘನಾ ಸರ್ಜಾ ಬಹುದಿನಗಳ ನಂತರ, ತಮ್ಮ ಆಪ್ತ ಗೆಳತಿಯರ ಜತೆಗೆ ಥಾಯ್ಲೆಂಡ್ ಪ್ರವಾಸ ಮಾಡಿದ್ದಾರೆ. ಇದೀಗ ಮೇಘನಾ ಸರ್ಜಾ, ಥಾಯ್ಲೆಂಡ್ ಪ್ರವಾಸದಲ್ಲಿ ತೆಗೆದ ಹಾಟ್​ ಫೋಟೋಗಳನ್ನು ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಮೇಘನಾ ಶೇರ್ ಮಾಡಿಕೊಂಡಿರುವ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.

ಮೇಘನಾ ರಾಜ್, ತಮ್ಮ ಸ್ನೇಹಿತೆಯರೊಂದಿಗೆ ಥಾಯ್ಲೆಂಡ್​ಗೆ ತೆರಳಿದ್ದು, ಅಲ್ಲಿನ ಪ್ರವಾಸಿ ಸ್ಥಳಗಳನ್ನು ಸುತ್ತಾಡಿದ್ದಾರೆ. ಈ ವೇಳೆ ಸ್ವಿಮ್ಮಿಂಗ್​ ಫೂಲ್​ನಲ್ಲಿರುವಾಗ ತೆಗೆದಿರುವ ಸೆಲ್ಫಿಯನ್ನು ಅಪ್ಲೋಡ್ ಮಾಡಿದ್ಧಾರೆ. ಸ್ವಿಮ್ಮಿಂಗ್​ ಫೂಲ್​ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಮೇಘನಾ.

ಮೇಘನಾ ರಾಜ್ ತಮ್ಮ ನಾಲ್ಕು ಜನ ಆತ್ಮೀಯ ಗೆಳತಿಯರೊಂದಿಗೆ ಥಾಯ್ಲೆಂಡ್​ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮೇಘನಾ ಸ್ನೇಹಿತೆಯರೊಂದಿಗಿರುವ ಹಳೆಯ ಮತ್ತು ಹೊಸ ಫೋಟೋವನ್ನು ಒಟ್ಟಾಗಿ ಇನ್ಸ್​​ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಫ್ರೆಂಡ್ಸ್​ ಫಾರ್​ಎವೆರ್ (Friends Forever) ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net