More

    ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಅಮೆರಿಕದಲ್ಲಿ STEM ಉನ್ನತ ವ್ಯಾಸಂಗಕ್ಕೆ ‘ಖ್ವಾಡ್​ ಫೆಲೋಶಿಪ್​’

    ವಾಷಿಂಗ್ಟನ್​​: ಅಮೆರಿಕದಲ್ಲಿ ಸ್ಟೆಮ್​​ ಪ್ರೋಗ್ರಾಂಗಳಲ್ಲಿ ಉನ್ನತ ವ್ಯಾಸಂಗ ನಡೆಸುವ ಅಪೇಕ್ಷೆಯುಳ್ಳ ನಾಲ್ಕು ದೇಶಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಬಂದಿದೆ. ಖ್ವಾಡ್​ ರಾಷ್ಟ್ರಗಳಾದ ಭಾರತ, ಜಪಾನ್​, ಆಸ್ಟ್ರೇಲಿಯ ಮತ್ತು ಅಮೆರಿಕದಿಂದ ತಲಾ 25 ವಿದ್ಯಾರ್ಥಿಗಳಿಗೆ ಪ್ರತಿವರ್ಷ “ಖ್ವಾಡ್​ ಫೆಲೋಶಿಪ್​” ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

    ಶುಕ್ರವಾರ ವಾಷಿಂಗ್ಟನ್​ನ ವೈಟ್​ಹೌಸ್​ನಲ್ಲಿ ನಡೆದ ಖ್ವಾಡ್​ ನಾಯಕರ ಸಭೆಯಲ್ಲಿ ಬಿಡೆನ್​ ಈ ಘೋಷಣೆ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್ ಮತ್ತು ಜಪಾನಿನ ಯೋಶಿಹಿಡೆ ಶುಗಾ ಈ ಸಭೆಯಲ್ಲಿ ಭಾಗವಹಿಸಿದ್ದರು.

    ಇದನ್ನೂ ಓದಿ: ಐತಿಹಾಸಿಕ ಅವಕಾಶ: ಮೊದಲ ಬಾರಿಗೆ ಯುವತಿಯರಿಂದ ಎನ್​ಡಿಎ ಪರೀಕ್ಷೆಗೆ ಅರ್ಜಿ ಆಹ್ವಾನ

    ಸ್ಟೆಮ್​(ಸೈನ್ಸ್​, ಟೆಕ್ನಾಲಜಿ, ಇಂಜಿನಿಯರಿಂಗ್ ಮತ್ತು ಮ್ಯಾಥೆಮ್ಯಾಟಿಕ್ಸ್) ಪ್ರೋಗ್ರಾಂಗಳಲ್ಲಿ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ವ್ಯಾಸಂಗ ನಡೆಸಲು ಖಾಸಗಿ ಪ್ರಾಯೋಜಕತ್ವದಲ್ಲಿ 100 ವಿದ್ಯಾರ್ಥಿಗಳನ್ನು ಪ್ರತಿವರ್ಷ ಖ್ವಾಡ್​ ಫೆಲೋಶಿಪ್​ಗೆ ಆಯ್ಕೆ ಮಾಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

    ಗಡಿಯಾಚೆಗಿನ ಭಯೋತ್ಪಾದನೆ, ಪ್ರಾಕ್ಸಿ ಕಾರ್ಯಾಚರಣೆಗಳ ವಿರುದ್ಧ ಕೈಜೋಡಿಸಿದ ಭಾರತ-ಅಮೆರಿಕ

    ‘ವಿಜಯಾನಂದ’ ಚಿತ್ರದ ಆಡಿಷನ್ಸ್​ಗೆ ಜಮಾಯಿಸಿದ ಕಲಾವಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts