ಬೆಂಗಳೂರು: ಪ್ರಯಾಣಿಕರ ಅನುಕೂಲವಾಗಲೆಂದು ನಮ್ಮ ಮೆಟ್ರೋ ಅಧಿಕಾರಿಗಳು(ಬಿಎಂಆರ್ಸಿಎಲ್) ಸಿಹಿ ಸುದ್ದಿಯೊಂದನ್ನು ಮೆಟ್ರೋ ಸಂಚಾರದ ಬಗ್ಗೆ ಶುಕ್ರವಾರ ಹಂಚಿಕೊಂಡಿದ್ದಾರೆ.
ಹೌದು, ಪ್ರತಿದಿನ ಬೆಳಗ್ಗೆ 5 ಗಂಟೆಗೆ ಆರಂಭವಾಗುವ ಮೆಟ್ರೋ ಇನ್ಮುಂದೆ ಪ್ರತಿ ವಾರಂತ್ಯದಲ್ಲಿ ಊರಿಗೆ ತೆರಳಿರುವ ಪ್ರಯಾಣಿಕರಿಗೆ ಉಪಯೋಗವಾಲೆಂದು ಪ್ರತಿ ಸೋಮವಾರ(ಜ.13) ಬೆಳಗ್ಗೆ 4.05ರಿಂದಲೇ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಯಕ್ಷಗಾನ ಕಲೆಗೆ ಸಂಘಟಕರ ಕೊಡುಗೆ ಅಪಾರ – ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ
ಇದು ಜ.13ರಿಂದ ಜಾರಿಗೆ ಬರಲಿದ್ದು, ಈ ವ್ಯವಸ್ಥೆ ಪ್ರತಿ ಸೋಮವಾರ ಮಾತ್ರ(ಉಳಿದ ದಿನಗಳಲ್ಲಿ ಎಂದಿನಂತೆ ಸಂಚಾರ, ಬೆಳಗ್ಗೆ 05ಕ್ಕೆ) ಇರುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸೂಪರ್ಹೀರೋ, ಅನಿಮೆ ಮತ್ತು ಕಾಮಿಕ್ ಪಾತ್ರಗಳ ಸಂಗಮ; ಕಾಮಿಕ್ ಕಾನ್ಗೆ ದಿನಗಣನೆ
ಈ ಕುರಿತು ಪ್ರತಿಕೆ ಪ್ರಕಟಣೆ ಹೊರಡಿಸಿರುವ ನಮ್ಮ ಮೆಟ್ರೋ, ‘’ ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಎಲ್ಲಾ ನಿಲ್ದಾಣಗಳಿಂದ ಮೆಟ್ರೋ ಸೇವೆಯನ್ನು 2025ರ ಜನವರಿ 13ರಿಂದ ಜಾರಿಗೆ ಬರುವಂತೆ ಬೆಳಗ್ಗೆ 4:15 ರಿಂದ ಪ್ರಾರಂಭಿಸಲಿದೆ’’ ಎಂದು ಹೇಳಿದ್ದಾರೆ.
ನಗರಕ್ಕೆ ಹಿಂತಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮೆಟ್ರೋ ಸೇವೆಯನ್ನು ಬೆಳಗ್ಗೆ 4.15 ರಿಂದ ಆರಂಭಿಸಲು ನಿರ್ಧರಿಸಿದೆ. ಈ ಬದಲಾವಣೆ ಇದೇ ಜ.13 ರಿಂದ ಜಾರಿಗೆ ಬರಲಿದೆ. pic.twitter.com/fxPKr8Pxax
— ನಮ್ಮ ಮೆಟ್ರೋ (@OfficialBMRCL) January 10, 2025
ಈಗ ಮುಂಜಾನೆ 5:00 ಮೆಟ್ರೋ ಸೇವೆ ಆರಂಭವಾಗುತ್ತಿದ್ದು, ಅದನ್ನು ಸೋಮವಾರ ಮಾತ್ರ 45 ನಿಮಿಷ ಮುಂಚಿತವಾಗಿ ಆರಂಭಿಸಲಾಗುತ್ತಿದೆ. ಉಳಿದಂತೆ ವಾರದ ಉಳಿದ ಎಲ್ಲ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂ.ಗೌರವಧನ: ಸರ್ಕಾರ ಒಪ್ಪಿಗೆ