ಪ್ರತಿ ಮನೆಯಲ್ಲಿ ಮಲೆನಾಡು ಗಿಡ್ಡ : ಡಾ.ಕೆ.ವಿ.ಚಿದಾನಂದ ಕರೆ

New Project (17)
Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ಮಲೆನಾಡು ಗಿಡ್ಡ ದೇಶೀಯ ತಳಿ ಹಸುವಿನ ಹಾಲು ಅಮೃತ ಇದ್ದಂತೆ. ನಮ್ಮ ಆರೋಗ್ಯ ಮತ್ತು ಕೃಷಿ ಬದುಕು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿ ಒಂದು ಮಲೆನಾಡು ಗಿಡ್ಡ ದನವನ್ನು ಸಾಕಿ ಬೆಳೆಸಬೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹೇಳಿದರು.

ಸುಳ್ಯ ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಭಾನುವಾರ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ಮತ್ತು ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ವೆಬ್‌ಸೈಟ್ ಅನಾವರಣ, ಗೋಪೂಜೆ ಹಾಗೂ ಗೋವುಗಳ ಸಂರಕ್ಷಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ಸಂಘಟಕ ಅಕ್ಷಯ್ ಆಳ್ವ ಮಾತನಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ವೆಬ್‌ಸೈಟ್ ಲೋಕಾರ್ಪಣೆಗೊಳಿಸಿದರು. ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ಅಧ್ಯಕ್ಷ ಸದಾಶಿವ ಭಟ್ ಮರಿಕೆ ಅಧ್ಯಕ್ಷತೆ ವಹಿಸಿದ್ದರು. ಎನ್‌ಡಿಆರ್‌ಐ(ನ್ಯಾಷನಲ್ ಡೈರಿ ಸಂಶೋಧನಾ ಸಂಸ್ಥೆ) ಬೆಂಗಳೂರು ಫಾರ್ಮರ್ ಹೆಡ್ ಡಾ.ಕೆ.ಪಿ.ರಮೇಶ್, ಮಾಜಿ ಸಚಿವ ಎಸ್.ಅಂಗಾರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿಕೆವಿಕೆ ಬೆಂಗಳೂರು ವಿಶ್ರಾಂತ ಉಪಕುಲಪತಿ ಡಾ.ವಿಶ್ವನಾಥ್, ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪುರುಷೋತ್ತಮ ಕೆ.ಜಿ. ಮುಖ್ಯ ಅತಿಥಿಗಳಾಗಿದ್ದರು. ದೀಪ್ತಿ, ವೈಶಾಲಿ, ಪ್ರಸನ್ನ ಪ್ರಾರ್ಥಿಸಿದರು. ಕೆವಿಜಿ ಆಯುರ್ವೇದ ಕಾಲೇಜು ಉಪನ್ಯಾಸಕಿ ಡಾ.ಹರ್ಷಿತಾ ಪುರುಷೋತ್ತಮ ಸ್ವಾಗತಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ಮೂರು ವರ್ಷಗಳಿಂದ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದಿಂದ ಸಾವಯವ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಸಾಧ್ಯವಾಗಿದೆ. ನಿಜವಾದ ಗೋ ಸಂರಕ್ಷಣೆ ಉದ್ದೇಶದಿಂದ 2,500ಕ್ಕೂ ಅಧಿಕ ಸಾವಯವ ಕೃಷಿಕರಿಗೆ ಮಲೆನಾಡು ಗಿಡ್ಡ ಒಂದು ಗಂಡು ಮತ್ತು ಒಂದು ಹೆಣ್ಣು ಕರುಗಳನ್ನು ವಿತರಿಸಿದ್ದೇವೆ. ಸಾವಿರಾರು ಮಂದಿಯಿಂದ ಬೇಡಿಕೆ ಇದೆ. ಆದರೆ ಗೋ ತಳಿಗಳನ್ನು ಸಂರಕ್ಷಣೆ ಮಾಡುವ ಆಯ್ದ ಕೃಷಿಕರಿಗೆ ವಿತರಿಸುತ್ತಿದ್ದೇವೆ. ಅಕ್ಷಯ್ ಆಳ್ವ, ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ಸಂಘಟಕ

ವಿಚಾರಗೋಷ್ಠಿ, ಗೋಪೂಜೆ

ಸಭಾ ಕಾರ್ಯಕ್ರಮ ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಎನ್‌ಡಿಆರ್‌ಐ ಬೆಂಗಳೂರು ಫಾರ್ಮರ್ ಹೆಡ್ ಡಾ.ಕೆ.ಪಿ.ರಮೇಶ್ ಹಾಗೂ ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪುರುಷೋತ್ತಮ ಕೆ.ಜಿ. ಅವರು ಮಲೆನಾಡು ಗಿಡ್ಡ ತಳಿ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭ ಗೋ ಪೂಜೆ, ಗೋವುಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net