ಮಂಗಳೂರು : ಕೊಂಕಣಿಯ ಪ್ರಥಮ ಕಾದಂಬರಿ ‘ಆಂಜೆಲ್ ‘ ಇದರ 75ನೇ ವರ್ಷದ ಸಂಭ್ರಮದ ನೆನಪಿಗಾಗಿ ಕಾದಂಬರಿಯ ಕುರಿತು ಅಧ್ಯಯನ ಕಾರ್ಯಾಗಾರವನ್ನು ಜು.13ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ನಂತೂರಿನಲ್ಲಿರುವ ಸಂದೇಶ ಸಭಾಂಗಣದಲ್ಲಿ ನಡೆಸಲು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ನಿರ್ಧರಿಸಿದೆ. ಇದೇ ಸಂದರ್ಭ ಕಾದಂಬರಿಯನ್ನು ಕನ್ನಡ, ಇಂಗ್ಲೀಷ್ ಹಾಗೂ ಇತರ
ಭಾಷೆಗಳಿಗೆ ಭಾಷಾಂತರಿಸಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟಾೃನಿ ಆಲ್ವಾರಿಸ್ ತಿಳಿಸಿದ್ದಾರೆ.
1950ರಲ್ಲಿ ಖ್ಯಾತ ಕೊಂಕಣಿ ಸಾಹಿತಿ ಜೋಕಿಂ ಸಂತಾನ್ ಆಲ್ವಾರಿಸ್ ಕನ್ನಡ ಲಿಪಿಯಲ್ಲಿ ಬರೆದ ‘ಆಂಜೆಲ್ ‘ ಕೊಂಕಣಿ ಕಾದಂಬರಿ ವಿಶ್ವ ಯುದ್ಧಗಳ ನೆರಳಿನಲ್ಲಿ ಪರಿವರ್ತನೆ ಹೊಂದುತ್ತಿರುವ ಸಮಾಜದ ಚಿತ್ರಣವನ್ನು ಹಾಗೂ ಕೌಟುಂಬಿಕ ಬದುಕಿನ ತುಮುಲಗಳನ್ನು ಮನೋಜ್ಞವಾಗಿ ಚಿತ್ರಿಸಿತ್ತು.
