

ಬೆಂಗಳೂರು: ಸತತವಾಗಿ ಇಳಿಕೆ ಕಂಡಿದ್ದ ಚಿನ್ನ ಬೆಳ್ಳಿ ದರದಲ್ಲಿ ಕಳೆದ ನಾಲ್ಕು ದಿನಗಳಿಂದ ಏರಿಕೆ ಕಂಡುಬರುತ್ತಿದೆ. ಚಿನ್ನಾಭರಣ ಪ್ರಿಯರಿಗೆ ತುಸು ಬೇಸರ ಮೂಡುವಂತಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರದಂದು 10 ಗ್ರಾಂ ಚಿನ್ನದ ದರದಲ್ಲಿ 411 ರೂಪಾಯಿ ಏರಿಕೆ ಕಂಡುಬಂದಿದೆ. ಈ ಮೂಲಕ ಚಿನ್ನದ ದರ 47,291 ರೂಪಾಯಿಯಷ್ಟಾಗಿದೆ. ಬೆಳ್ಳಿ ದರದಲ್ಲೂ 338 ರೂಪಾಯಿ ಹೆಚ್ಚಳವಾಗಿದ್ದು, ಒಂದು ಕೆಜಿ ಬೆಳ್ಳಿ ದರ 68,335 ರೂಪಾಯಿಯಾಗಿದೆ.
ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರೆಟ್ ಚಿನ್ನದ ದರದಲ್ಲಿ 90 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನದ ದರದಲ್ಲಿ 100 ರೂಪಾಯಿ ಏರಿಕೆಯಾಗಿದೆ. ಈ ಮೂಲಕ 22 ಕ್ಯಾರೆಟ್ ಚಿನ್ನದ ದರ (10 ಗ್ರಾಂ ಗೆ) 44,250 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನದ ದರ (10 ಗ್ರಾಂ ಗೆ) 48,270 ರೂಪಾಯಿಯಾಗಿದೆ.ಬೆಳ್ಳಿ ದರದಲ್ಲೂ 600 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ದರ 69,200 ರೂಪಾಯಿಯಾಗಿದೆ. (ಏಜೆನ್ಸೀಸ್)