

Gold Rate: ರಾಕೆಟ್ ವೇಗದಲ್ಲಿ ಸಾಗುತ್ತಿರುವ ಚಿನ್ನದ ಬೆಲೆಗಳು ಇದೀಗ 1 ಲಕ್ಷ ರೂ. ಗಡಿದಾಟಿ ಮುನ್ನುಗ್ಗುತ್ತಿರುವುದು ಸದ್ಯ 'ಚಿನ್ನ'ದಂತ ಗ್ರಾಹಕರನ್ನು ತೀವ್ರ ಚಿಂತೆಗೆ ದೂಡಿದೆ. ಪ್ರಸ್ತುತ, ಮದುವೆ ಮತ್ತು ಸರಣಿ ಶುಭ ಸಮಾರಂಭಗಳ ಸೀಸನ್. ಇಂಥಾ ಸಮಯದಲ್ಲೇ ಗೋಲ್ಡ್ ಬೆಲೆಗಳು ಆಕಾಶಕ್ಕೆ ಮುತ್ತಿಡುತ್ತಿರುವುದು ಕೊಳ್ಳುವವರನ್ನು ಖರೀದಿಯಿಂದ ಇನ್ನಷ್ಟು ದೂರ ಸರಿಯುವಂತೆ ಮಾಡಿದೆ. ಇದರ ಪರಿಣಾಮವಾಗಿ, ದೇಶದಲ್ಲಿ ಚಿನ್ನದ ಬೆಲೆ ಇದೀಗ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಕಳೆದ ಕೆಲವು ದಿನಗಳಿಂದ ಇಳಿಕೆಯತ್ತ ಸಾಗುತ್ತಿದ್ದ ಚಿನ್ನದ ಬೆಲೆ ಇಂದು ದಿಢೀರ್ ಹೆಚ್ಚಳ ಕಂಡಿದೆ. ಮಂಗಳವಾರ (ಸೆ.23) ಬೆಳಗ್ಗಿನ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಗೋಲ್ಡ್ ಬೆಲೆ 1,260 ರೂ. ಹೆಚ್ಚಾಗಿದೆ. 99.9 ಪ್ರತಿಶತ ಶುದ್ಧತೆ ಹೊಂದಿರುವ 10 ಗ್ರಾಂ ಚಿನ್ನದ ಬೆಲೆ ಇದೀಗ 1,14,000 ರೂ. ದಾಟಿದೆ. ಹಾಗಿದ್ದರೆ, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ? ಎಂಬುದರ ವಿವರ ಹೀಗಿದೆ ಗಮನಿಸಿ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.