

ನವದೆಹಲಿ: ಚಿನ್ನದ ಬೆಲೆಯ ನಾಗಾಲೋಟ ಮುಂದುವರಿದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಒಂದೇ ದಿನ ಚಿನ್ನದ ದರ 1,100 ರೂ. ಏರಿಕೆಯಾಗಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಗುರುವಾರ 10 ಗ್ರಾಂಗೆ 83,800 ರೂ. ಇದ್ದದ್ದು ಶುಕ್ರವಾರ 84,900 ರೂ.ಗೆ ಏರಿಕೆ ಆಗಿದೆ.
ಆಭರಣ ತಯಾರಕರು ಮತ್ತು ಗ್ರಾಹಕರಿಂದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ 160 ರೂ.ನಷ್ಟು ಇಳಿಕೆ ಕಂಡಿದೆ. ಸೋಮವಾರ 10 ಗ್ರಾಂಗೆ 83 ಸಾವಿರ ರೂ. ಬೆಲೆಯಲ್ಲಿ ಮಾರಾಟವಾಗಿದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಮಂಗಳವಾರ 82,840 ರೂ.ಗೆ ಮಾರಾಟವಾಯಿತು.
ಶೇ. 99.5ರಷ್ಟು ಶುದ್ಧತೆಯ ಚಿನ್ನ ಸೋಮವಾರ 82,600 ರೂ.ಗೆ ಮಾರಾಟವಾದದ್ದು, ಮಂಗಳವಾರ 82,440 ರೂ.ಗೆ ಮಾರಾಟವಾಯಿತು. ಬೆಳ್ಳಿಯ ಬೆಲೆ ಮಂಗಳವಾರ ಕೆಜಿಗೆ 92 ಸಾವಿರ ರೂ. ಇತ್ತು ಎಂದು ಅಖಿಲ ಭಾರತ ಸರಾಫರ ಸಂಘ ತಿಳಿಸಿದೆ.