ಅಂಗಡಿಯಲ್ಲಿದ್ದ ಚಿನ್ನದ ಕರಿಮಣಿ ಸರ ಕಳವು

THEFT 1
Published on

ಕಾರ್ಕಳ: ಕಾರ್ಕಳ ನಗರದಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಅಂಗಡಿಯಲ್ಲಿದ್ದ ಚಿನ್ನದ ಕರಿಮಣಿ ಸರ ಎಗರಿಸಿದ್ದಾನೆ. ಇಲ್ಲಿನ ಮುಖ್ಯರಸ್ತೆಯಲ್ಲಿರುವ ಲಕ್ಷ್ಮೀ ಗಣೇಶ್ ಬಿಲ್ಡಿಂಗ್‌ನಲ್ಲಿನ ಪ್ರಣವ್ ಜುವೆಲ್ಲರಿ ಅಭರಣದ ಮಳಿಗೆಗೆ ಬಂದ ಕಳ್ಳನೋರ್ವ ಆಭರಣ ಖರೀದಿ ನೆಪದಲ್ಲಿ ಅಂಗಡಿಯಲ್ಲಿದ್ದ ಆಭರಣ ಮಾರಾಟ ಮಾಡುತಿದ್ದ ಹುಡುಗಿಯ ಬಳಿ ಮಾತನಾಡುತ್ತಾ ಕಪಾಟಿನಲ್ಲಿದ್ದ ಬಂಗಾರದ ಕರಿಮಣಿ ಸರ ಎಳೆದುಕೊಂಡು ಓಡಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಕಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕಳ್ಳನನ್ನು ಬಂಧಿಸಲು ಬಲೆಬೀಸಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net