

ಹೆಬ್ರಿ: ಯುವಕರು ತಮ್ಮ ಉದ್ಯೋಗ ಮತ್ತು ವ್ಯವಹಾರದ ಜತೆಗೆ ಸಮಾಜಮುಖಿ ಆಲೋಚನೆಗಳೊಂದಿಗೆ ಸಂಘಟಿತರಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಯುವಕರು ಸದಾ ಕ್ರಿಯಾಶೀಲರಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ ಶೆಟ್ಟಿ ಹೇಳಿದರು.
ದೊಂಡೇರಂಗಡಿಯಲ್ಲಿ ಕಡ್ತಲ ಗ್ರಾಮೀಣ ಕಾಂಗ್ರೆಸ್ ಮತ್ತು ಉದಯ್ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗ ಆಶ್ರಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಸೌಹಾರ್ದ ಟ್ರೋಫಿಯಲ್ಲಿ ಇತ್ತೀಚೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋಪಿನಾಥ್ ಭಟ್ ಉದ್ಘಾಟಿಸಿದರು. ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಪ್ರಮುಖರಾದ ಮನೋಜ್ ಹೆಗ್ಡೆ ಮೂರ್ಸಾಲು, ಮೋಹನ್ ಶೆಟ್ಟಿ ಎಣ್ಣೆಹೊಳೆ, ಸಿರಿಯಣ್ಣ ಶೆಟ್ಟಿ, ಅಜಿತ್ ಹೆಗ್ಡೆ ಮಾಳ, ಯೋಗಿಶ್ ಮಲ್ಯ, ಶುಭದ ರಾವ್, ದೀಪಕ್ ಕೋಟ್ಯಾನ್, ಜಗದೀಶ್ ಹೆಗ್ಡೆ, ಕ್ರೀಡಾಪಟುಗಳಾದ ಸುಕೇಶ್ ಹೆಗ್ಡೆ ಕಡ್ತಲ, ಅನುಷಾ ಪೂಜಾರಿ ಉಪಸ್ಥಿತರಿದ್ದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ, ಮಂಜುನಾಥ್ ಪೂಜಾರಿ ಮುದ್ರಾಡಿ, ಶೇಖರ್ ಮಡಿವಾಳ ಕಾರ್ಕಳ, ಪ್ರವೀಣ್ ಬಲ್ಲಾಳ್ ಹೆಬ್ರಿ, ಶಾಂತರಾಮ್ ಸೂಡ ಪೆರ್ಡೂರು, ಸಂತೋಷ್ ಕುಲಾಲ್ ಪಕ್ಕಾಲು ಇದ್ದರು. ಬಡ ಕುಟುಂಬಗಳಿಗೆ ಸಹಾಯಧನ, ಪ್ರತಿಭಾ ಪುರಸ್ಕಾರ, ಹಿರಿಯ ಕಾಂಗ್ರೆಸಿಗರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸೌಹಾರ್ದ ಟ್ರೋಫಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಪತ್ ಪೂಜಾರಿ ಸ್ವಾಗತಿಸಿದರು. ವಿನಯ್ ಮತ್ತು ಪ್ರದೀಪ್ ಶೆಟ್ಟಿ ನಿರೂಪಿಸಿದರು. ರಾಘವ ದೇವಾಡಿಗ ವಂದಿಸಿದರು. ಕಾರ್ಯಕಾರಿ ಸಮಿತಿ ಅಜಿತ್ ದೇವಾಡಿಗ, ಪ್ರಸನ್ನ ದೇವಾಡಿಗ, ರಾಘವ ಕುಕ್ಕುಜೆ, ಅಖಿಲೇಶ್ ಶೆಟ್ಟಿ ಸಹಕರಿಸಿದರು.