More

  ಮಗನನ್ನು ಕೊಂದಿದ್ದ ಬೆಂಗಳೂರು ಸ್ಟಾರ್ಟ್‌ಅಪ್ ಸಿಇಒ ವಿರುದ್ಧ ಗೋವಾ ಪೊಲೀಸರಿಂದ ಚಾರ್ಜ್‌ಶೀಟ್ ಸಲ್ಲಿಕೆ..

  ಪಣಜಿ(ಗೋವಾ): ಗೋವಾದ ಅಪಾರ್ಟ್ ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಬೆಂಗಳೂರಿನ ಎಐ ಸ್ಪಾರ್ಟ್ ಅಪ್‌ನ ಸಿಇಒ ಸುಚನಾ ಸೇಠ್​(39) ವಿರುದ್ಧ ಗೋವಾ ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ನಲ್ಲಿಸಿದ್ದಾರೆ.

  ಇದನ್ನೂ ಓದಿ: ಮತ್ತೊಮ್ಮೆ ದಕ್ಷಿಣದತ್ತ ಮುಖಮಾಡಿದ ರಾಹುಲ್​ಗಾಂಧಿ: ವಯನಾಡ್​ನಿಂದ ನಾಮಪತ್ರ ಸಲ್ಲಿಕೆ..

  ಜನವರಿ 7 ರಂದು ತನ್ನ ಮಗನ ಶವವನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಟ್ಯಾಕ್ಸಿಯಲ್ಲಿ ತೆರಳುತ್ತಿದ್ದ ಸೇಠ್ ರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿತ್ತು. ಜನವರಿ 6 ರಂದು ರಾತ್ರಿ ಗೋವಾ ರಾಜ್ಯದ ಕ್ಯಾಂಡೋಲಿಮ್ ಪ್ರದೇಶದ ಅಪಾರ್ಟ್‌ ಮೆಂಟ್‌ನಲ್ಲಿ ತನ್ನ ಮಗುವನ್ನು ಕೊಂದ ನಂತರ ಆಕೆ ಬೆಂಗಳೂರತಿನತ್ತ ಬರುತ್ತಿದ್ದರು.

  ಈ ವಾರದ ಆರಂಭದಲ್ಲಿ ಕ್ಯಾಲಂಗುಟ್ ಪೊಲೀಸರು ಸೇಠ್​ ವಿರುದ್ಧ 642 ಪುಟಗಳ ಆರೋಪಪಟ್ಟಿಯನ್ನು ಗೋವಾ ಮಕ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ಸ್ಟಾರ್ಟ್ ಆಪ್ ಸಿಇಒ ಮಗನ ಕೊಲೆ ಪೂರ್ವ ಯೋಜಿತ ಎಂದು ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ

  ಕತ್ತು ಹಿಸುಕಿದ್ದರಿಂದ ಉಸಿರುಕಟ್ಟಿಕೊಂಡು ಮಗು ಸಾವನ್ನಪ್ಪಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸೇಠ್​ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 201 (ಕಚೇರಿಯ ಸಾಕ್ಷಾಧಾರಗಳು ನಾಪತ್ತೆ) ಮತ್ತು ಗೋವಾ ಮಕ್ಕಳ ರಕ್ಷಣಾ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
  ಗೋವಾ ಪೊಲೀಸರು ಪ್ರಕರಣದಲ್ಲಿ 59 ಸಾಕ್ಷಿಗಳನ್ನು ಹೆಸರಿಸಿದ್ದಾರೆ. ಆರೋಪಿಯ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶದ ಹೊರತಾಗಿಯೂ ಸೇಠ್​ ತನ್ನ ಪತಿಗೆ ಮಗನನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.

  ಗೋವಾ ಮಕ್ಕಳ ನ್ಯಾಯಾಲಯದಲ್ಲಿ ಜೂನ್ 14 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

  ಐ ಫೋನ್​, ಐಪ್ಯಾಡ್, ಮ್ಯಾಕ್‌ಬುಕ್‌ ಬಳಕೆದಾರರೇ ಎಚ್ಚರ: ಹೈ ರಿಸ್ಕ್​ ಎನ್ನುತ್ತಿರುವುದೇಕೆ ಕೇಂದ್ರ ಸರ್ಕಾರ..!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts