More

  ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣದ ವೇಳೆ ಕಲ್ಲು ತೂರಾಟ! ಗಾಯಗೊಂಡ ಸಚಿವ

  ಪಣಜಿ: ದಕ್ಷಿಣ ಗೋವಾದ ಗ್ರಾಮವೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದ ಬೆನ್ನಲ್ಲೇ ಗುಂಪೊಂದು ಸಚಿವರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಗೋವಾ ಸಚಿವ ಸುಭಾಷ್ ಫಲ್ ದೇಸಾಯಿ ಸದ್ಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಇದನ್ನೂ ಓದಿ: ತಮಿಳುನಾಡಿಗೆ ಜಯಾ ಚಿನ್ನಾಭರಣ: 6 ಪೆಟ್ಟಿಗೆಗಳ ಸಮೇತ ಬರುವಂತೆ ಸೆಷನ್ಸ್ ಕೋರ್ಟ್ ಸೂಚನೆ

  ಮಾರ್ಗಾವೊ ಪಟ್ಟಣದ ಸಮೀಪದ ಸಾವೊ ಜೋಸ್ ಡಿ ಏರಿಯಲ್ ಗ್ರಾಮದಲ್ಲಿ ಮರಾಠ ರಾಜರ ಪ್ರತಿಮೆಯನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಆಕ್ರೋಶಗೊಂಡ ಕೆಲವರು, ತಮ್ಮ ಗುಂಪಿನೊಂದಿಗೆ ಸೇರಿ, ಕಲ್ಲು ತೂರಾಟ ನಡೆಸಿದೆ. ಸೋಮವಾರದಂದು ಛತ್ರಪತಿ ಶಿವಾಜಿಯ 394ನೇ ಜನ್ಮದಿನವನ್ನು ಆಚರಿಸಲು ರಾಜ್ಯಾದ್ಯಂತ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನದ ವೇಳೆ ಸಚಿವರು ಪ್ರತಿಮೆ ಅನಾವರಣಗೊಳಿಸಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಲ್ಲು ತೂರಾಟ ಸಂಭವಿಸಿದೆ.

  ಘಟನೆ ಬಗ್ಗೆ ಮಾತನಾಡಿದ ರಾಜ್ಯ ಸಮಾಜ ಕಲ್ಯಾಣ ಸಚಿವರು, “ನಾನು ಗ್ರಾಮದಲ್ಲಿ ಅವರೊಂದಿಗೆ ಸ್ವಲ್ಪ ಸಮಯ ಚರ್ಚಿಸಿದ ಬಳಿಕ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸಿದ ಗುಂಪೊಂದು ಏಕಾಏಕಿ ಕಲ್ಲು ತೂರಾಟ ನಡೆಸಿತು. ಘಟನೆಯಲ್ಲಿ ಸಣ್ಣ-ಪುಟ್ಟ ಗಾಯಗಾಳಾಗಿವೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

  ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts