ಬಂಟ್ವಾಳ: ಬಿ.ಸಿ.ರೋಡ್ ಅಜ್ಜಿಬೆಟ್ಟುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕಂಪ್ಯೂಟರ್ ಶಿಕ್ಷಕ ಶಿವಮೂರ್ತಿ ಮುತುವರ್ಜಿಯಲ್ಲಿ ಹಾಗೂ ಸಂಪಾದಕತ್ವದಲ್ಲಿ ಜ್ಞಾನಮಿತ್ರ ಎಂಬ ಡಿಜಿಟಲ್ ಪತ್ರಿಕೆಯನ್ನು ಆರಂಭಿಸಲಾಗಿದ್ದು, ಪುರಸಭಾ ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್ ಶಾಲೆಯಲ್ಲಿ ಬಿಡುಗಡೆಗೊಳಿಸಿದರು.
ಪ್ರತಿ ವಾರ ಜ್ಞಾನಮಿತ್ರ ಸಾಮಾಜಿಕ ಮಾಧ್ಯಮ ಮೂಲಕ ಶಾಲಾ ವಿದ್ಯಾರ್ಥಿಗಳ ಪಾಲಕರಿಗೆ ತಲುಪಲಿದ್ದು, ವಿದ್ಯಾರ್ಥಿಗಳ ಕಥೆ, ಕವನ ಹಾಗೂ ಪೂರಕ ಮಾಹಿತಿಗಳು ಇದರಲ್ಲಿ ಅಡಕವಾಗಿವೆ ಎಂದು ಶಿವಮೂರ್ತಿ ತಿಳಿಸಿದರು. ಮುಖ್ಯಶಿಕ್ಷಕ, ಸಹಿತ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.