ಕಡಬ: ಸಹಕಾರ ತತ್ವ ನಮ್ಮ ದೇಶದಲ್ಲಿ ರಕ್ತಗತವಾಗಿ ಬೆಳೆದುಬಂದಿದೆ. ರೈತರ ಹಿತ ಕಾಪಾಡುವಲ್ಲಿ ಸಹಕಾರಿ ಕ್ಷೇತ್ರದ ಪಾಲು ಅತಿ ದೊಡ್ಡದು ಎಂದು ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಕಡಬ ತಾಲೂಕು ಚಾರ್ವಾಕ ಪ್ರಾ.ಕೃ.ಪ. ಸಹಕಾರಿ ಸಂಘದ ಶತಮಾನೋತ್ಸವ, ಸಂಘದ ನೂತನ ಕಟ್ಟಡದಲ್ಲಿ ದೀಪ ಬೆಳಗಿಸಿ ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಶಿಸ್ತುಬದ್ಧ ಉದ್ದೇಶ ಇಟ್ಟುಕೊಂಡು ವ್ಯವಹಾರ ನಡೆಸುವ ಜಿಲ್ಲೆಯ ಸಹಕಾರಿ ಕ್ಷೇತ್ರ ದೇಶಕ್ಕೆ ಮಾದರಿ. ಪ್ರಧಾನಿ ನರೇಂದ್ರ ಮೋದಿಯವರು ಸಹಕಾರಿ ಖಾತೆ ಸೃಷ್ಟಿಸಿ ಸಹಕಾರಿ ಕ್ಷೇತ್ರಕ್ಕೆ ಬಲ ನೀಡುವಲ್ಲಿ ಸಫಲರಾಗಿದ್ದಾರೆ. ಅಧಿಕಾರದ ಯೋಗ ಸಿಕ್ಕಾಗ ಪಾರದರ್ಶಕವಾಗಿ ಧರ್ಮದ ಆಧಾರದಲ್ಲಿ ಅಂತಹ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ನೂತನ ಕಚೇರಿ ಕಟ್ಟಡ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್.ಉದನಡ್ಕ ಅಧ್ಯಕ್ಷತೆ ವಹಿಸಿದ್ದರು.
ಡಿಸಿಸಿ ಬ್ಯಾಂಕ್ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಎಸ್.ಎಂ.ಎಸ್ ಮಾಹಿತಿಗೆ ಚಾಲನೆ ನೀಡಿದರು. ಕಿಶೋರ್ ಕುಮಾರ್ ಪುತ್ತೂರು ಸಂಪರ್ಕ ರಸ್ತೆ ಉದ್ಘಾಟಿಸಿದರು. ಕಾಣಿಯೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಕೊಪ್ಪ, ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ವಕೀಲ ಮೋಹನ್ ಗೌಡ ಇಡ್ಯಡ್ಕ ಶುಭಹಾರೈಸಿದರು.
ಮಾಜಿ ಸಚಿವ ಎಸ್.ಅಂಗಾರ, ಕಾಣಿಯೂರು ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಇಡ್ಯಡ್ಕ, ನಿರ್ದೇಶಕರಾದ ಅನಂತ ಕುಮಾರ್ ಬೈಲಂಗಡಿ, ವಿಶ್ವನಾಥ ಕೂಡಿಗೆ, ಸುಂದರ ಗೌಡ ದೇವಸ್ಯ, ಪರಮೇಶ್ವರ ಗೌಡ ಅನಿಲ, ಲೋಕೇಶ್ ಗೌಡ ಆತಾಜೆ, ರಮೇಶ್ ಉಪ್ಪಡ್ಕ, ದಿವಾಕರ ಮರಕ್ಕಡ, ಶೀಲಾವತಿ ಮುಗರಂಜ, ವೀಣಾ ಅಂಬುಲ, ರತ್ನಾವತಿ ಮುದುವ ಉಪಸ್ಥಿತರಿದ್ದರು.
ಕುಸುಮಾಧರ ರೈ ಕಾಸ್ಪಾಡಿಗುತ್ತು ಕೃತಜ್ಞತೆ ಸಲ್ಲಿಸಿದರು. ಗಣೇಶ್ ಉದನಡ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶೋಕ್ ಗೌಡ ಪಿ. ವಂದಿಸಿದರು. ಶಿಕ್ಷಕ ಸುರೇಶ್ ಪಡಿಪಾಂಡ ನಿರೂಪಿಸಿದರು.
ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಮಾರ್ಗದರ್ಶನದಲ್ಲಿ ಚಾರ್ವಾಕ ಭಾಗದ ಅನೇಕ ಹಿರಿಯರು ಸೇರಿ, ಉಪ್ಪಿನಂಗಡಿ ತಾಲೂಕು ಕೇಂದ್ರ ಆಗಿದ್ದ ಸಂದರ್ಭ ಚಾರ್ವಾಕ ಗ್ರಾಮದಲ್ಲಿ ಸಂಘ ಸ್ಥಾಪನೆ ಮಾಡಿದ್ದರು. ಇದೀಗ ಶತಮಾನೋತ್ಸವದ ಅಂಗವಾಗಿ ಸ್ಥಳೀಯ 4.30 ಸೆಂಟ್ಸ್ ಜಾಗ ಖರೀದಿ ಮಾಡಿ 3 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ್ದೇವೆ.
ಗಣೇಶ್ ಕೆ.ಎಸ್.ಉದನಡ್ಕ
ಸಂಘದ ಅಧ್ಯಕ್ಷ
ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ
ಸಂಘದ ಸ್ಥಾಪಕ ಸದಸ್ಯರು, ಸ್ಥಳ ದಾನಿಗಳು, ಮಾಜಿ ಅಧ್ಯಕ್ಷರು, ನಿವೃತ್ತ ಸಿಬ್ಬಂದಿ ಮತ್ತಿತರರಿಗೆ ಗೌರವಾರ್ಪಣೆ ನಡೆಯಿತು. ಪುಣತ್ತಾರು, ಕಾಣಿಯೂರು ರಿಕ್ಷಾ ಚಾಲಕ–ಮಾಲೀಕ ಸಂಘ, ಸಾರ್ವಜನಿಕರಿಂದ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಅವರನ್ನು ಸನ್ಮಾನಿಸಲಾಯಿತು. ಕಳೆದ ಆರ್ಥಿಕ ವರ್ಷದ ಡಿವಿಡೆಂಡ್ ಬಿಟ್ಟುಕೊಟ್ಟ ಸಂಘದ ಸದಸ್ಯರಿಗೆ ಏರ್ಪಡಿಸಲಾದ ಅದೃಷ್ಟ ಚೀಟಿಯಲ್ಲಿ ಓರ್ವರಿಗೆ ಚಿನ್ನದ ಬಹುಮಾನ ನೀಡಲಾಯಿತು. ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಪ್ರತಿಯೊಬ್ಬರಲ್ಲಿ ಮೂಡಲಿ ಸಾಹಿತ್ಯ ಪ್ರೀತಿ – ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ಟ ಆಶಯ