ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದ ದಾಖಲೆಯನ್ನು ನಿರ್ಮಿಸಿದೆ.
2025 ರ ಜ.12 ರಂದು 7,710 ಪ್ರಯಾಣಿಕರ ಆಗಮನ ಮತ್ತು ನಿರ್ಗಮನವನ್ನು ವಿಮಾನ ನಿಲ್ದಾಣವು ನಿರ್ವಹಿಸಿದೆ. ಇದು 2020 ಅಕ್ಟೋಬರ್ 31 ರ ವಿಮಾನ ನಿಲ್ದಾಣದ ವಾಣಿಜ್ಯ ಕಾರ್ಯಾಚರಣೆ ದಿನಾಂಕ (ಸಿಒಡಿ) ನಂತರ ಇದು ದಾಖಲೆ ಸಂಖ್ಯೆಯಾಗಿದೆ.
7,613 ವಯಸ್ಕರು ಮತ್ತು 97 ಶಿಶುಗಳು ಸೇರಿದ್ದಾರೆ. 24 ಆಗಮನ ಮತ್ತು 25 ನಿರ್ಗಮನಗಳಲ್ಲಿ 49 ಏರ್ ಟ್ರಾಫಿಕ್ ಮೂವ್‌ಮೆಂಟ್ (ಎಟಿಎಂ) ಗಳಿವೆ. ಈ ಹಿಂದೆ 2024ರ ನ.10ರಂದು 49 ಎಟಿಎಂಗಳೊಂದಿಗೆ 7,637 ಪ್ರಯಾಣಿಕರು ಪ್ರಯಾಣಿಸಿ ದಾಖಲೆ ನಿರ್ಮಿಸಿದ್ದರು. ವಿಮಾನ ನಿಲ್ದಾಣವು 2025 ಜನವರಿ 11 ರಂದು 48 ಎಟಿಎಂಗಳನ್ನು ಒಳಗೊಂಡಂತೆ 7,538 ಪ್ರಯಾಣಿಕರ ಚಲನೆಗೆ ಸಹಾಯ ಮಾಡಿತು, ಇದು ಸಿಒಡಿ ನಂತರದ ಐದನೇ ಅತ್ಯಧಿಕ ಏಕದಿನ ಸಂಖ್ಯೆಯಾಗಿದೆ.
ಈ ಹಿಂದೆ, ವಿಮಾನ ನಿಲ್ದಾಣವು 2024 ಜ. 4ರಂದು 7,613 ಪ್ರಯಾಣಿಕರನ್ನು ಪ್ರಕ್ರಿಯೆಗೊಳಿಸಿದೆ. 2023 ಡಿ. 31 ರಂದು 7,548 ಪ್ರಯಾಣಿಕರು, 2023 ನ.25ರಂದು 7,452 ಪ್ರಯಾಣಿಕರು, 2024 ಆ.15ರಂದು 7,406 ಪ್ರಯಾಣಿಕರು, 2023 ನ.19ರಂದು 7,399 ಪ್ರಯಾಣಿಕರು, 2023 ಡಿ.10ರಂದು 7,350 ಪ್ರಯಾಣಿಕರನ್ನು ನಿರ್ವಹಿಸಿದೆ.