More

    ಜಿಮೇಲ್​, ಯೂಟ್ಯೂಬ್​ ವರ್ಕ್​ ಆಗ್ತಿಲ್ಲ! ವಿಶ್ವದೆಲ್ಲೆಡೆ ಕೇಳಿಬರ್ತಿದೆ ಒಂದೇ ದೂರು

    ನವದೆಹಲಿ: ಯೂಟ್ಯೂಬ್​ ಪ್ರಿಯರಿಗೆ ಸೋಮವಾರ ಸಂಜೆ ಯೂಟ್ಯೂಬ್​ ಸ್ವಲ್ಪ ನಿರಾಸೆ ಉಂಟುಮಾಡಿದೆ. ಇದ್ದಕ್ಕಿದ್ದಂತೆ ಯೂಟ್ಯೂಬ್​ ಮತ್ತು ಜಿಮೇಲ್​ ಎರಡರದ್ದೂ ಸರ್ವರ್​ ಡೌನ್​ ಆಗಿದ್ದು, ಈ ಎರಡೂ ಆ್ಯಪ್​ಗಳು ಕಾರ್ಯ ಸ್ಥಗಿತಗೊಳಿಸಿದ್ದವು. ವಿಶ್ವದ ಮೂಲೆ ಮೂಲೆಯಿಂದಲೂ ಈ ಕುರಿತಾಗಿ ದೂರುಗಳು ಕೇಳಿಬರಲಾರಂಭಿಸಿವೆ.

    ಇದನ್ನೂ ಓದಿ: ಕಮಲ​ ಹಾಸನ್​​ಗೆ ರಜನಿಕಾಂತ್​ ಜತೆ ಮೈತ್ರಿ ಇಲ್ಲ? ಓವೈಸಿ ಕೈ ಹಿಡಿಯುವ ಸಾಧ್ಯತೆ!

    ಜಿಮೇಲ್​, ಯೂಟ್ಯೂಬ್​ ವರ್ಕ್​ ಆಗ್ತಿಲ್ಲ! ವಿಶ್ವದೆಲ್ಲೆಡೆ ಕೇಳಿಬರ್ತಿದೆ ಒಂದೇ ದೂರು ಜಿಮೇಲ್​, ಯೂಟ್ಯೂಬ್​ ವರ್ಕ್​ ಆಗ್ತಿಲ್ಲ! ವಿಶ್ವದೆಲ್ಲೆಡೆ ಕೇಳಿಬರ್ತಿದೆ ಒಂದೇ ದೂರುಕೇವಲ ಈ ಎರಡು ಆ್ಯಪ್​ಗಳು ಮಾತ್ರವಲ್ಲದೆ, ಗೂಗಲ್​, ಗೂಗಲ್​ ಪೇ, ಗೂಗಲ್​ ಮ್ಯಾಪ್​ ಸೇರಿದಂತೆ ಗೂಗಲ್​ ಹಲವು ಆ್ಯಪ್​ಗಳಲ್ಲಿ ಸಮಸ್ಯೆಯಾಗುತ್ತಿರುವುದಾಗಿ ಅನೇಕರು ದೂರು ದಾಖಲಿಸಿದ್ದಾರೆ. ತಾಂತ್ರಿಕ ದೋಷದಿಂದ ಈ ಸಮಸ್ಯೆಯಾಗಿರುವ ಸಾಧ್ಯತೆಯಿದೆ. ಈ ಕುರಿತಾಗಿ ಗೂಗಲ್​ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಸೋಮವಾರ ಸಂಜೆ 5 ಗಂಟೆಯ ನಂತರ ಈ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. 6 ಗಂಟೆಯ ನಂತರ ಆ್ಯಪ್​ಗಳ ಸರ್ವರ್​ ಸರಿಯಾಗಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

    ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts