More

    ಅರೇ..ಇದೆಂಥಾ ವಿಚಿತ್ರ ಶಾಟ್​! ಮ್ಯಾಕ್ಸಿಯ ಹೊಸ ಹೊಡೆತಕ್ಕೆ ಏನೆಂದು ಕರೀಬೇಕು ನೀವೇ ಹೇಳಿ…

    ಸಿಡ್ನಿ: ಆಸ್ಟ್ರೇಲಿಯಾದ ಆಲ್​ರೌಂಡರ್​ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ಬಗ್ಗೆ ಭಾರತೀಯರಿಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಮೈದಾನದಲ್ಲಿ ಅಬ್ಬರಿಸಿ ಬೊಬ್ಬೊರಿಯುವ ಮ್ಯಾಕ್ಸಿ ಕ್ರೀಡಾಭಿಮಾನಿಗಳ ನೆಟ್ಟಿನ ಕ್ರಿಕೆಟರ್​. ಕಳೆದ ನವೆಂಬರ್​ನಲ್ಲಿ ಮುಕ್ತಾಯಗೊಂಡು ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ನಿರ್ಣಾಯಕ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಏಕಾಂಗಿಯಾಗಿ ಹೋರಾಡಿ ದ್ವಿಶತಕ ಸಿಡಿಸುವ ಮೂಲಕ ಸೋಲಿನ ದವಡೆಯಲ್ಲಿ ಸಿಲುಕಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ್ದನ್ನು ಎಂದಿಗೂ ಮರೆಯುವಂತಿಲ್ಲ. ಆಸ್ಟ್ರೇಲಿಯಾ ವಿಶ್ವಕಪ್​ ಗೆಲುವಿನಲ್ಲಿ ಮ್ಯಾಕ್ಸಿ ಪಾತ್ರವೂ ಕೂಡ ಮ್ಯಾಕ್ಸಿಮಮ್​ ಎಂದರೆ ಅತಿಶಯೋಕ್ತಿ ಆಗಲಾರದು.

    ಮ್ಯಾಕ್ಸಿ ತಮ್ಮ ವಿಭಿನ್ನ ಹೊಡೆತಗಳಿಂದಲೇ ಫೇಮಸ್​. ಅಲ್ಲದೆ, ಮ್ಯಾಕ್ಸಿ ಪವರ್​ ಹಿಟ್ಟರ್​ ಕೂಡ ಹೌದು. ಸದ್ಯ ಬಿಗ್​ ಬ್ಯಾಷ್​ ಲೀಗ್​ (ಬಿಬಿಎಲ್​)ನಲ್ಲಿ ಮ್ಯಾಕ್ಸಿ ಬಿಜಿಯಾಗಿದ್ದಾರೆ. ಮೆಲ್ಬೋರ್ನ್​ ಸ್ಟಾರ್ಸ್​ ಪರ ಆಡುತ್ತಿರುವ ಮ್ಯಾಕ್ಸಿ, ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್ ತಂಡದ ವಿರುದ್ಧ ಮ್ಯಾಕ್ಸಿ ಪರಿಚಯಿಸಿ ಹೊಸ ಹಾಗೂ ವಿಭಿನ್ನ ಹೊಡೆತ ನೆಟ್ಟಿಗರ ಗಮನ ಸೆಳೆದಿದೆ.​

    ಮ್ಯಾಕ್ಸಿಯ ಹೊಸ ಹೊಡೆತಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಮ್ಯಾಕ್ಸಿ ಸ್ಕೂಪ್​ ಮತ್ತು ರಿವರ್ಸ್​ ಎರಡೂ ಹೊಡೆತವನ್ನು ಮಿಕ್ಸ್​ ಮಾಡಿದ್ದಾರೆ. ಅಲ್ಲದೆ, ಬೌಂಡರಿ ಸಹ ಬಾರಿಸಿದರು. ವಿಡಿಯೋ ನೋಡಿದ ನೆಟ್ಟಿಗರು ಇದು ಮ್ಯಾಕ್ಸಿ ಸ್ಟೈಲ್​ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಹೊಡೆತಕ್ಕೆ ಏನೆಂದು ಕರೆಯುತ್ತಾರೆ ಹೇಳಿ ಎಂದು ಕೇಳುತ್ತಿದ್ದಾರೆ. ವಿಡಿಯೋ ನೋಡಿದ ಮೇಲೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.

    ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಮೆಲ್ಬೋರ್ನ್​ ರೆನೆಗೇಡ್ಸ್​ ಮತ್ತು ಮೆಲ್ಬೋರ್ನ್​ ಸ್ಟಾರ್ಸ್​ ನಡುವೆ ಮಂಗಳವಾರ (ಜ.02) ಪಂದ್ಯ ನಡೆಯಿತು. ಮಳೆಯ ಕಾರಣದಿಂದಾಗಿ ಪಂದ್ಯವನ್ನು 14 ಓವರ್​ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟ್​ ಮಾಡಿದ ರೆನೆಗೇಡ್ಸ್​ 7 ವಿಕೆಟ್​ ನಷ್ಟಕ್ಕೆ 97 ರನ್​ ಕಲೆಹಾಕಿತು. ಗುರಿ ಬೆನ್ನತ್ತಿದ ಮೆಲ್ಬೋರ್ನ್​ ಸ್ಟಾರ್ಸ್​ 12 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 98 ರನ್​ ಕಲೆಹಾಕುವ ಮೂಲಕ ಗೆಲುವಿನ ನಗೆ ಬೀರಿತು.

    ಮೆಲ್ಬೋರ್ನ್​ ಸ್ಟಾರ್ಸ್​ ಪರ ಬಿರುಸಿನ ಆಟವಾಡಿದ ಮ್ಯಾಕ್ಸಿ ಕೇವಲ 15 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 2 ಬೌಡಂರಿ ನೆರವಿನೊಂದಿಗೆ ಅಜೇಯ 32 ರನ್​ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬಿಬಿಎಲ್​ನಲ್ಲಿ ಮ್ಯಾಕ್ಸಿ ನೇತೃತ್ವದಲ್ಲಿ ಮೆಲ್ಬೋರ್ನ್​ ಸ್ಟಾರ್ಸ್​ ತಂಡಕ್ಕೆ ಇದು ನಾಲ್ಕನೆಯ ಗೆಲುವಾಗಿದೆ. (ಏಜೆನ್ಸೀಸ್​)

    ಮ್ಯಾಕ್ಸಿ ದ್ವಿಶತಕ ಸಿಡಿಸಿಲು ಕಾಲಿನ ಗಾಯವೇ ಕಾರಣ! ಸಚಿನ್​ ಕೊಟ್ಟ ಅಚ್ಚರಿಯ ವಿವರಣೆ ಹೀಗಿದೆ…

    ಪತ್ನಿ ಕೊಂದು ಪರಾರಿಯಾಗಿದ್ದ ಗಂಡ ಶವವಾಗಿ ಪತ್ತೆ: ಬಾಗಿಲು ತೆರೆದ ಪೊಲೀಸರಿಗೆ ಕಂಡಿದ್ದು ಕಣ್ಣೀರು ತರಿಸುವ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts