ದೇವರಿಗೆ ಕೊಡುವುದು ದಾನವಲ್ಲ ಅರ್ಪಣೆ

Bdk_Charity

ಬದಿಯಡ್ಕ: ದುಡಿದು ಸಂಪಾದಿಸಿದ ಆದಾಯದಲ್ಲಿ ಒಂದಂಶವನ್ನು ಸಮಾಜಕ್ಕೆ ಹಿಂತಿರುಗಿಸುವುದರಿಂದ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ. ದೇವಾಲಯಗಳಿಗೆ ನಾವು ನೀಡುವ ತನು ಮನ ದಾನಗಳು ಅರ್ಪಣೆಯಾಗಬೇಕು, ಅವುಗಳು ದೇಣಿಗೆ ಎನಿಸಬಾರದು. ನಾಡಿನ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳಿಗೆ ಒತ್ತು ನೀಡಬೇಕು. ಆಧುನಿಕ ಯುಗದಲ್ಲಿ ಭಕ್ತರು ಇದನ್ನು ಬಯಸುತ್ತಾರೆ. ಇಲ್ಲಿ ಆರಂಭಗೊಂಡ ‘ಶಿವಾರ್ಪಣಂ’ ಯೋಜನೆಯು ಬ್ರಹ್ಮಕಲಶೋತ್ಸವಕ್ಕೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ನಡೆಯಲಿ ಎಂದು ಉದ್ಯಮಿ, ಸಮಾಜ ಪ್ರೇರಕ ಎಡಕ್ಕಾನ ಮಹಾಬಲೇಶ್ವರ ಭಟ್ ಹೇಳಿದರು.

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಶಿವಾರ್ಪಣಂ ದ್ವಿತೀಯ ಶ್ರಮದಾನಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಖಜಾಂಚಿ ವೈ.ವಿ.ಸುಬ್ರಹ್ಮಣ್ಯ ಹಾಗೂ ಕಾರ್ಯದರ್ಶಿ ಡಾ.ಪ್ರಕಾಶ್ ವೈ.ಎಚ್.ಉಪಸ್ಥಿತರಿದ್ದರು. ಸಮಿತಿ ಪದಾಧಿಕಾರಿ ಡಾ.ವೈ.ವಿ.ಕೃಷ್ಣಮೂರ್ತೀ ಸ್ವಾಗತಿಸಿದರು. ಸಮಿತಿ ಸಂಯೋಜಕ ಚಂದ್ರಶೇಖರ ಏತಡ್ಕ ವಂದಿಸಿದರು. ಊರಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಶಿವಾರ್ಪಣಂ ಶ್ರಮದಾನ ಸೇವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಕಂಬಾರು ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ

ಸಂಚಾರಕ್ಕೆ ಸಿದ್ಧಗೊಂಡ ಪಾದಚಾರಿ ಸೇತುವೆ

 

Share This Article

ನೋಡೋಕೆ ಚೆನ್ನಾಗಿದೆ ಅಂತ ಮೋಸ ಹೋಗ್ಬೇಡಿ…ತಾಜಾ, ರುಚಿಯಾದ ಕಿತ್ತಳೆ ಹಣ್ಣು ಖರೀದಿಸಲು ಇಲ್ಲಿದೆ ಟಿಪ್ಸ್​! Orange

Orange : ಕಿತ್ತಳೆ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ವಿಟಮಿನ್​ ಸಿ…

ಹಾವು ಕಚ್ಚಿದ ಬಳಿಕ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ; First Aid ಎಂದು ಮಾಡುವ ವಿಧಾನ ಪ್ರಾಣಕ್ಕೆ ಸಂಚಕಾರ

ಸಾಮಾನ್ಯವಾಗಿ ಹಾವು ಕಚ್ಚಿದ ಬಳಿಕ ಸುತ್ತಮುತ್ತ ಇರುವ ಜನರು ಪ್ರಥಮ ಚಿಕಿತ್ಸೆ(First Aid) ಎಂದು ಹಲವು…

ಚಳಿಗಾಲದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Tender coconut

Tender coconut : ನೈಸರ್ಗಿಕವಾಗಿ ಹೇರಳವಾಗಿ ದೊರೆಯುವ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಲೆಕ್ಟ್ರೋಲೈಟ್ಸ್​, ವಿಟಮಿನ್ಸ್​,…