ಸಂಚಾರಕ್ಕೆ ಸಿದ್ಧಗೊಂಡ ಪಾದಚಾರಿ ಸೇತುವೆ

Bdk_Bridge
Published on

ಮಂಜೇಶ್ವರ: ನೂತನವಾಗಿ ನಿರ್ಮಾಣಗೊಂಡ ಷಟ್ಪಥ ರಸ್ತೆ ಪೂರ್ಣಗೊಳ್ಳುವಾಗ ರಸ್ತೆಗಳ ಇಕ್ಕೆಡೆಗಳಲ್ಲೂ ತಡೆಬೇಲಿ ಹಾಕಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಅತ್ತಿಂದಿತ್ತ ಸಾಗುವುದು ಸವಾಲಾಗಿ ಪರಿಣಮಿಸಿದೆ.

ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ರಸ್ತೆ ದಾಟುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ತೂಮಿನಾಡು ಜಂಕ್ಷನ್‌ನಲ್ಲಿ ಒಂದು ಪಾದಚಾರಿ ಮೇಲ್ಸೇತುವೆ ಸ್ಥಳೀಯರ ಬೇಡಿಕೆಯಂತೆ ನಿರ್ಮಾಣವಾಗಿದೆ.

ತೂಮಿನಾಡು ಮತ್ತು ಸುತ್ತಮುತ್ತಲಿನ ಭಾಗದ ಜನರಿಗೆ ರಸ್ತೆ ದಾಟಲು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಾಯಕವಾಗಲಿರುವ ಈ ಸೇತುವೆ, ಅಲ್ಲಿನ ಸಾರ್ವಜನಿಕರಿಗೆ ಸಂಚಾರ ಸುಗಮಗೊಳಿಸಲು ಸಹಾಯ ಮಾಡಲಿದೆ. ಅಭಿವೃದ್ಧಿ ಹೊಂದುತ್ತಿರುವ ತೂಮಿನಾಡು ಪ್ರದೇಶದ ಜನರ ಓಡಾಟಕ್ಕೆ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net