ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮದೇವರ ಕಂಬಳಗದ್ದೆಯ ಪ್ರಮುಖವಾದ ಅಶ್ವತ್ಥಕಟ್ಟೆಯನ್ನು ತಂತ್ರಿವರ್ಯರಾದ ರಾಮಮೋಹನ ಅರಿನಾಯರ ನೇತೃತ್ವದಲ್ಲಿ ನಿರ್ಮಾಣ ಮಾಡುತ್ತಿದ್ದು, ಅದರ ಪೂರ್ವಭಾವಿಯಾಗಿ ಅಶ್ವತ್ಥ ಗಿಡವನ್ನು ಕಟ್ಟೆಮನೆ ಪಕೀರ ಮೂಲ್ಯರು ನೆಡುವ ಮೂಲಕ ಅರಿಬೈಲು ಗೋಪಾಲ ಶೆಟ್ಟಿ ಪ್ರಾರ್ಥನೆಗೈದು ಹೊಸ ಮಣ್ಣು ಬುಡಕ್ಕೆ ಸಮರ್ಪಿಸಿ ಚಾಲನೆ ನೀಡಿದರು.
ಈ ವರ್ಷದ ಅರಿಬೈಲು ಕಂಬಳ ಡಿ.4 ರಂದು ನಡೆಯಲಿದ್ದು, ಕಂಬಳದ ಸಂದರ್ಭದಲ್ಲಿ ಕಟ್ಟೆಯ ಕೆಲಸ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಯಿತು. ಗ್ರಾಮಸ್ಥರು ಉಪಸ್ಥಿತರಿದ್ದರು.
ಅಕ್ರಮ ಮರಳುಗಾರಿಕೆ 9 ದೋಣಿಗಳು ಜಪ್ತಿ : ಪೊಳಲಿ, ಮಲ್ಲೂರಿನಲ್ಲಿ ಅಧಿಕಾರಿಗಳಿಂದ ಕಾರ್ಯಾಚರಣೆ