ಗುರುಪುರ: ಪೊಳಲಿ ಸೇತುವೆಗೆ ಹತ್ತಿರದ ಉದ್ದಬೆಟ್ಟು ಮತ್ತು ಮಲ್ಲೂರಿನಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಅಧಿಕಾರಿಗಳ ತಂಡ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ 9 ದೋಣಿಗಳನ್ನು ಜಪ್ತಿ ವಾಡಲಾಗಿದೆ.
ಪೊಳಲಿಗೆ ಹತ್ತಿರದಲ್ಲಿ ಫಲ್ಗುಣಿ ನದಿಯ ಹಲವು ಕಡೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಮಂಗಳೂರು ತಾಲೂಕು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಹಾಗೂ ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳ ನೇತತ್ವದ ತಂಡದಿಂದ ಅಕ್ರಮ ಮರಳುಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆದಿದೆ.
ತಂಡದಲ್ಲಿ ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಶ್ರೀಧರ್, ಗುರುಪುರ ಕೈಕಂಬ ಹೋಬಳಿ ಉಪತಹಶೀಲ್ದಾರ್ ಸ್ಟೀಫನ್, ಸುರತ್ಕಲ್ ಮತ್ತು ಗುರುಪುರ ವ್ಯಾಪ್ತಿಯ ಕಂದಾಯ ನಿರೀಕ್ಷಕರು, ಮಂಗಳೂರು ತಾಲೂಕು ಗ್ರಾವಾಡಳಿತಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರ್ಯಾಚರಣೆ ವೇಳೆ ಒಟ್ಟು 9 ದೋಣಿ ಜಪ್ತಿ ವಾಡಲಾಗಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ಅಧಿಕಾರಿಗಳ ತಂಡ ದಾಳಿ ವಾಡುತ್ತಲೇ ನದಿ ಪಾತ್ರದಲ್ಲಿ ಮರಳುಗಾರಿಕೆಯಲ್ಲಿ ತೊಡಗಿದ್ದ ದೋಣಿಗಳಲ್ಲಿದ್ದ ಕಾರ್ಮಿಕರು ನೀರಲ್ಲಿ ಓಡಿ ಪರಾರಿಯಾಗಿದ್ದಾರೆ. ಅಕ್ರಮ ಮರಳುಗಾರಿಕೆ ಬಗ್ಗೆ ಗಣಿ ಇಲಾಖೆಯಿಂದ ಪೊಲೀಸ್ ದೂರು ದಾಖಲಾದ ಬಗ್ಗೆ ವಾಹಿತಿ ಲಭ್ಯವಾಗಿಲ್ಲ.
ನೀರಲ್ಲಿ ತೇಲುತ್ತಿದ್ದ ಚಪ್ಪಲಿಗಳು!
ಪೊಳಲಿ ಭಾಗದಲ್ಲಿ ಅಧಿಕಾರಿಗಳ ತಂಡದ ಕಾರ್ಯಾಚರಣೆ ವೇಳೆ ಫಲ್ಗುಣಿ ನದಿಯಿಂದ ದೋಣಿಗಳ ಮೂಲಕ ಅಕ್ರಮವಾಗಿ ಮರಳು ತೆಗೆಯುವ ಕಾರ್ಮಿಕರು ಏಕಾಏಕಿಯಾಗಿ ಕಾಲ್ಕಿತ್ತಿದ್ದಾರೆ. ಈ ಸಂದರ್ಭ ಅವರು ಚಪ್ಪಲಿಗಳನ್ನು ಬಿಟ್ಟೋಡಿದ್ದು, ನದಿ ನೀರಲ್ಲಿ ಅವು ತೇಲಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅಧಿಕಾರಿಗಳ ದಾಳಿ ವೇಳೆ ಕೆಲವು ದೋಣಿಗಳನ್ನು ನದಿ ನೀರಲ್ಲಿ ಮುಳುಗಿಸಿಟ್ಟಿರುವ ಸಾಧ್ಯತೆ ಕಂಡು ಬಂದಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿಬ್ಬಂದಿಯು ಜೆಸಿಬಿ ಮತ್ತು ದೋಣಿಗಳ ಸಹಾಯದಿಂದ ಅವುಗಳ ಶೋಧ ಕಾರ್ಯ ನಡೆಸಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ಅರ್ಚನಾ ತಿಳಿಸಿದರು.
10ರಂದು ನಿವಿಯಸ್ ಮಂಗಳೂರು ಮ್ಯಾರಥಾನ್- 2024 – ವಿಜೇತರಿಗೆ ಸಿಗಲಿದೆ ಒಟ್ಟು 12 ಲಕ್ಷ ರೂ. ಬಹುಮಾನ