

ಲಖನೌ: ಜನರು ತಾವು ಇಷ್ಟಪಟ್ಟಿರುವುದನ್ನು ಪಡೆಯಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಹುಡುಗನೊಬ್ಬನಿಗೋಸ್ಕರ್ ಹುಡುಗಿಯರಿಬ್ಬರು ಜನನಿಬಿಡ ರಸ್ತೆಯಲ್ಲೇ ಕಿತ್ತಾಡಿಕೊಂಡಿರುವ ಘಟನೆ ನಡೆದಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದೆ.
ಉತ್ತರಪ್ರದೇಶದ ಭಾಗ್ಪತ್ನಲ್ಲಿ ಈ ಘಟನೆ ನಡೆದಿದ್ದು, ಸಿಂಘ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮೀನಗರ್ ಸರಾಯ್ ಟೌನ್‌ನಲ್ಲಿ ಈ ಬಗ್ಗೆ ವರದಿಯಾಗಿದೆ. ಹೊಡೆದಾಟದ ಸಂಬಂಧ ವೈರಲ್ ಆಗಿರುವ ವಿಡಿಯೋಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಸಿಂಘ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಕಿತ್ತಾಡಿಕೊಂಡ ಹುಡುಗಿಯರಿಬ್ಬರು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಹಪಾಠಿಗಳಾಗಿದ್ದಾರೆ. ಇವರಿಬ್ಬರು ಒಂದೇ ಹುಡುಗನನ್ನು ಪ್ರೀತಿಸುತ್ತಿದ್ದು, ಆಗಿಂದಾಗೆ ಆತನೊಂದಿಗೆ ಮಾತನಾಡುತ್ತಿದ್ದರು.
ಹುಡುಗನೊಂದಿಗೆ ಮಾತನಾಡುವ ವಿಚಾರಕ್ಕೆ ಹುಡುಗಿಯರ ನಡುವೆ ಗಲಾಟೆಯಾಗಿದ್ದು, ವಿಡಿಯೋ ವೈರಲ್ (Video Viral) ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹುಡುಗ ಹಾಗೂ ಹುಡುಗಿಯರ ಪೋಷಕರನ್ನು ಕರೆಸಿ ಮಾತನಾಡಲಾಗುವುದು ಎಂದು ಸಿಂಘ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.