More

    19ರ ಹರೆಯದ ಯುವತಿಗೆ 1800 ಕೋಟಿ ರೂಪಾಯಿಯ ಲಾಟರಿ! ಆದರೆ ಅದರಲ್ಲೂ ಇದೆ ಬಿಗ್​ ಟ್ವಿಸ್ಟ್​!

    ಲಂಡನ್​: ಲಾಟರಿ ಆಟವು ಸಂಪೂರ್ಣವಾಗಿ ಅದೃಷ್ಟದ ಮೇಲೆ ನಿಂತಿರುತ್ತದೆ. ಇಂಗ್ಲೆಂಡ್​ನ ಆ ವಿದ್ಯಾರ್ಥಿನಿಗೂ ಹಾಗೆ ಆ ವಾರ ಅದೃಷ್ಟ ಖುಲಾಯಿಸುವುದರಲ್ಲಿತ್ತು. ಆದರೆ ಆಕೆ ಮಾಡಿದ ಒಂದೇ ಒಂದು ತಪ್ಪಿನಿಂದಾಗಿ 1,800 ಕೋಟಿ ರೂಪಾಯಿ ಆಕೆಯ ಕೈ ತಪ್ಪಿ ಹೋಗುವಂತಾಗಿದೆ.

    ಇಂಗ್ಲೆಂಡ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ರಾಚೆಲ್ ಕೆನಡಿ ಕಳೆದ ಕೆಲ ತಿಂಗಳಿಂದ ಒಂದೇ ನಂಬರ್ ಮೇಲೆ ಲಾಟರಿ ಟಿಕೆಟ್​ ಖರೀದಿಸುತ್ತಿದ್ದಳಂತೆ. ವಿಶೇಷವೆಂದರೆ ಫೆಬ್ರವರಿ ಕೊನೆಯ ವಾರದಲ್ಲಿ ಆಕೆಯ ಆ ನಂಬರ್​ಗೆ 1800 ರೂಪಾಯಿ ಲಾಟರಿ ಮೌಲ್ಯ ಸಿಕ್ಕಿದೆ. ಆದರೆ ಅದನ್ನು ಕಂಡು ಖುಷಿ ಪಡಬೇಕಿದ್ದ ರಾಚೆಲ್ ಕೆನಡಿ ದುಃಖದಿಂದ ಕಣ್ಣೀರು ಸುರಿಸಿದ್ದಾಳೆ.

    ಪ್ರತಿ ವಾರ ತಪ್ಪದೇ ಲಾಟರಿ ಟಿಕೆಟ್​ ಖರೀದಿಸುತ್ತಿದ್ದ ರಾಚೆಲ್ ಕೆನಡಿ ಆ ವಾರ ವಿಶ್ವವಿದ್ಯಾಲಯದ ಕೆಲಸದಲ್ಲಿ ಸಾಕಷ್ಟು ಬಿಜಿ ಆಗಿಬಿಟ್ಟಿದ್ದಳಂತೆ. ಅದೇ ಕಾರಣದಿಂದಾಗಿ ಆಕೆಗೆ ಟಿಕೆಟ್ ಖರೀದಿಸಲು ಆಗಿಲ್ಲ. ಒಂದು ವೇಳೆ ಟಿಕೆಟ್​ ಖರೀದಿಸಲು ಸಮಯ ಸಿಕ್ಕಿದ್ದರೆ, ಅದೇ ನಂಬರಿಗೆ ಟಿಕೆಟ್​ ಖರೀದಿಸುತ್ತಿದೆ ಎಂದಿದ್ದಾಳೆ ಆಕೆ. ರಾಚೆಲ್​ನ ಪರಿಸ್ಥಿತಿಯ ಬಗ್ಗೆ ಆಕೆಯ ಬಾಯ್​ಫ್ರೆಂಡ್​ಗೂ ನಗು ಬಂದಿದೆ. ಈ ವಿಚಾರವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. (ಏಜೆನ್ಸೀಸ್​)

    ಎಟಿಎಂ ಒಡೆಯಲು ಆಗಲಿಲ್ಲವೆಂದು ಮಷಿನ್​ ಅನ್ನೇ ಹೊತ್ತೊಯ್ದ ಖದೀಮರು!

    ಇಂದಿರಾ ಗಾಂಧಿ ಕುಟುಂಬದ ಕುಡಿಗೆ ಟೀ ಎಸ್ಟೇಟ್​ನಲ್ಲಿ ಕೆಲಸ! ವೈರಲ್​ ಆಯ್ತು ಪ್ರಿಯಾಂಕಾ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts