More

    ಒಟಿಟಿಗೆ ಬರಲು ಸಜ್ಜಾಯ್ತು ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್’​!

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್‌ಕುಮಾರ್ ಅಭಿನಯದ ‘ಘೋಸ್ಟ್’​ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಗಳಿಸಿತು. ಇದೀಗ ಈ ಚಿತ್ರ ಒಟಿಟಿ ಪ್ಲಾಟ್​ಫಾರ್ಮ್​​ಗೆ ಲಗ್ಗೆಯಿಡಲು ಸಜ್ಜಾಗಿದ್ದು, ರಿಲೀಸ್​ ದಿನಾಂಕ ಕೂಡ ನಿಗದಿಯಾಗಿದೆ.

    ಇದನ್ನೂ ಓದಿ: ‘ಹ್ಯಾಪಿ ದಿವಾಳಿ..’ ಎಂದ ಅಭಿಮಾನಿಗೆ ಶಿವಣ್ಣ ಕೊಟ್ಟ ರಿಪ್ಲೈ ವೈರಲ್; ಅಂಥದ್ದೇನಂದ್ರು?

    ಆ್ಯಕ್ಷನ್​-ಥ್ರಿಲ್ಲರ್​ ಜಾನರ್​ ಒಳಗೊಂಡ ಈ ಚಿತ್ರವನ್ನು ಎಂ.ಜಿ. ಶ್ರೀನಿವಾಸ್​ ನಿರ್ದೇಶಿಸಿದ್ದು, ಸಂದೇಶ್​ ನಿರ್ಮಾಣ ಮಾಡಿದರು. ಇದೀಗ ‘ಘೋಸ್ಟ್’​ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್​ ಹಕ್ಕುಗಳನ್ನು ಜೀ5 ಪಡೆದುಕೊಂಡಿದೆ. ಒಟಿಟಿ ಪ್ರವೇಶಿಸಿದ ಈ ಚಿತ್ರವು ಇದೇ ನವೆಂಬರ್ 17, 2023 ರಂದು ಬಿಡುಗಡೆಯಾಗಲಿದೆ. ಮುಖ್ಯವಾಗಿ ಕನ್ನಡ ಮತ್ತು ತೆಲುಗು ಎರಡೂ ಆವೃತ್ತಿಯು ಏಕಕಾಲಕ್ಕೆ ಬರಲಿದೆ.

    ಚಿತ್ರದಲ್ಲಿ ಜಯರಾಮ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್, ದತ್ತಣ್ಣ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಸ್ಯಾಂಡಲ್​ವುಡ್​ನ ಮ್ಯಾಜಿಕಲ್​ ಕಂಪೋಸರ್​ ಅರ್ಜುನ್ ಜನ್ಯ ಸಂಗೀತವಿದೆ,(ಏಜೆನ್ಸೀಸ್).

    ರಾಜೀವ್ ಗಾಂಧಿ ಪುತ್ಥಳಿ ಧ್ವಂಸ; ತನಿಖೆ ಕೈಗೊಂಡ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts