ಜೆನಿಲಿಯಾ ಡಿಸೋಜಾ ಬಗ್ಗೆ ಈ ಸುದ್ದಿ ಕೇಳಿದಿರಾ?

Genelia Dsouza Final
Published on

ಎಂಟು ವರ್ಷಗಳೇ ಆಗಿದ್ದವು ಜೆನಿಲಿಯಾ, ತೆಲುಗು ಚಿತ್ರವೊಂದರಲ್ಲಿ ನಟಿಸಿ. ‘ನಾ ಇಷ್ಟಂ’ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜೆನಿಲಿಯಾ, ಆ ನಂತರ ರಿತೇಶ್ ದೇಶ್ಮುಖ್ ಅವರನ್ನು ಮದುವೆಯಾಗಿ ಸಾಂಸಾರಿಕ ಜೀವನವನ್ನು ಸವಿಯುತ್ತಿದ್ದಾರೆ. ಮಧ್ಯೆದಲ್ಲಿ ಒಂದೆರೆಡು ಚಿತ್ರಗಳಲ್ಲಿ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ಯಾವುದೇ ಚಿತ್ರದಲ್ಲೂ ಪೂರ್ಣಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.

ಈಗ ಜೆನಿಲಿಯಾ ತೆಲುಗಿಗೆ ವಾಪಸ್ಸು ಬರುತ್ತಿರುವುದಷ್ಟೇ ಅಲ್ಲ, ಚಿತ್ರವೊಂದರಲ್ಲಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮಲಯಾಳಂನ ಹಿಟ್ ಸಿನಿಮಾ ‘ಲೂಸಿಫರ್’, ತೆಲುಗಿಗೆ ರೀಮೇಕ್ ಆಗುತ್ತಿದೆ. ಈ ಚಿತದ ಹೀರೋ ಚಿರಂಜೀವಿ. ಇನ್ನು ನಾಯಕಿ ಪಾತ್ರಕ್ಕೆ ಜೆನಿಲಿಯಾ ಅವರನ್ನು ಕೇಳಲಾಗಿದೆಯಂತೆ. ಮೂಲ ಚಿತ್ರದಲ್ಲಿ ಈ ಪಾತ್ರವನ್ನು ಮಂಜು ವಾರಿಯರ್​ ಮಾಡಿದ್ದರು. ಈಗ ಅಂಥದ್ದೊಂದು ಅವಕಾಶ ಜೆನಿಲಿಯಾಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ನಾಯಕಿ ಎಂದರೆ ಮರ ಸುತ್ತುವ ಪಾತ್ರವಲ್ಲ. ಅದೊಂದು ವಿಭಿನ್ನ ಪಾತ್ರವಾಗಿದ್ದು ಜೆನಿಲಿಯಾ ನಟಿಸಿದರೆ ಚೆನ್ನ ಎಂಬುದು ಚಿತ್ರತಂಡದ ಅನಿಸಿಕೆ. ಈಗಾಗಲೇ ಈ ವಿಷಯವನ್ನು ಅವರೆದುರು ಪ್ರಸ್ತಾಪ ಮಾಡಿದ್ದು, ಅವರಿಂದ ಗ್ರೀನ್ ಸಿಗ್ನಲ್ ಬರುವುದಕ್ಕೆ ಚಿತ್ರತಂಡ ಕಾಯುತ್ತಿದೆ.

ಜೆನಿಲಿಯಾ ಒಪ್ಪಿದರು ಎಂದ ಮಾತ್ರಕ್ಕೆ, ತಕ್ಷಣವೇ ಚಿತ್ರ ಶುರುವಾಗುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ, ಚಿರಂಜೀವಿ ಮೊದಲು ‘ಆಚಾರ್ಯ’ ಎಂಬ ಚಿತ್ರ ಮುಗಿಸಬೇಕಿದೆ. ಆ ನಂತರವಷ್ಟೇ, ‘ಲೂಸಿಫರ್’ ತೆಲುಗು ರೀಮೇಕ್ ಶುರುವಾಗೋದು. ಅಲ್ಲಿಗೆ ಜೆನಿಲಿಯಾ ಅವರನ್ನು ತೆರೆಯ ಮೇಲೆ ನೋಡುವುದಕ್ಕೆ, ಎರಡು ವರ್ಷಗಳಾದರೂ ಕಾಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net