

ನ್ಯೂಯಾರ್ಕ್: ಚತುರ್ಥಿ ಪ್ರಯುಕ್ತ ಗೌರಿ-ಗಣೇಶ ಹಬ್ಬ ದೇಶಾದ್ಯಂತ ಮಾತ್ರವಲ್ಲದೆ, ವಿದೇಶದಲ್ಲೂ ನಡೆಯುತ್ತಿದೆ. ಅದರಲ್ಲೂ ನ್ಯೂಯಾರ್ಕ್ನಲ್ಲಿ ಕನ್ನಡಿಗರಿಂದ ಸಾಮೂಹಿಕ ಗೌರಿ ಪೂಜೆ ನಡೆದಿದೆ.
ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿ ನಗರದಲ್ಲಿ ಈ ಕಾರ್ಯಕ್ರಮದ ನಡೆದಿದೆ. ಇಲ್ಲಿನ ಕನ್ನಡ ಸಂಘದವರಿಂದ ಇಲ್ಲಿಯ ಹಿಂದೂ ದೇವಸ್ಥಾನದಲ್ಲಿ ಸಾಮೂಹಿಕ "ಗೌರಿ ಪೂಜೆ" ಸಂಭ್ರಮದಿಂದ ಆಯೋಜನೆಗೊಂಡಿದೆ.
ಈ ಪೂಜೆಯಲ್ಲಿ ಕನ್ನಡಿಗರನೇಕರು ಭಾಗಿಯಾಗಿದ್ದು, ಮಹಿಳೆಯರು ಗೌರಿ ಪೂಜೆಯಲ್ಲಿ ಪಾಲ್ಗೊಂಡರು. ಬಗೆಬಗೆಯ ಭಕ್ಷ್ಯಗಳನ್ನು ಒಳಗೊಂಡ ಮೃಷ್ಟಾನ್ನ ಭೋಜನವನ್ನು ಇಲ್ಲಿನ ಭಕ್ತಾದಿಗಳೇ ಸ್ವತಃ ತಯಾರಿಸಿದ್ದು ವಿಶೇಷ.