More

    ಕ್ರಿಯೇಟಿವ್ ಆಗುತ್ತಿರುವ ಪೊಲೀಸರು; ಬೆಂಗಳೂರು, ಹುಬ್ಬಳ್ಳಿ ಬಳಿಕ ಇದೀಗ ದೆಹಲಿ ಪೊಲೀಸರ ಸರದಿ

    ಬೆಂಗಳೂರು: ಯಾವುದೇ ಎಫ್​ಐಆರ್​ ಕಾಪಿ, ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿಗಳನ್ನು ನೋಡಿದವರಿಗೆ ಪೊಲೀಸರ ಬರಹ ಸಾಮಾನ್ಯವಾಗಿ ಸಪ್ಪೆಯಾಗಿ ಇರುತ್ತದೆ ಎಂಬುದು ಗೊತ್ತಿರುವಂಥ ವಿಚಾರವೇ. ಆದರೆ ಪೊಲೀಸರ ಬರವಣಿಗೆ ಸುಧಾರಿಸಿರುವುದಷ್ಟೇ ಅಲ್ಲ, ಅದರಲ್ಲೂ ಸೃಜನಶೀಲತೆ ಹೊರಹೊಮ್ಮುತ್ತಿರುವುದು ಕಂಡುಬರುತ್ತಿದೆ.

    ಪೊಲೀಸರು ಕ್ರಿಯೇಟಿವ್ ಆಗುತ್ತಿರುವುದನ್ನು ಪೊಲೀಸ್ ಇಲಾಖೆಯ ಸೋಷಿಯಲ್ ಮೀಡಿಯಾ ಖಾತೆಗಳು ಅನಾವರಣಗೊಳಿಸುತ್ತಿವೆ. ಈ ವಿಚಾರದಲ್ಲಿ ಬೆಂಗಳೂರು, ಹುಬ್ಬಳ್ಳಿ ಪೊಲೀಸರ ಬಳಿಕ ಇಂದು ದೆಹಲಿ ಪೊಲೀಸರು ಕ್ರಿಯೇಟಿವಿಟಿ ತೋರಿರುವುದು ಕಂಡುಬಂದಿದೆ. ಇಂಥದ್ದೊಂದು ಕ್ರಿಯೇಟಿವಿಟಿಯನ್ನು ಹೊರಹೊಮ್ಮಿಸಿರುವುದು ಇವತ್ತಿನ ಕ್ರಿಕೆಟ್ ಮ್ಯಾಚ್​.

    ಕೊಲಂಬೊದ ಆರ್​.ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಏಷ್ಯಾಕಪ್​ ಫೈನಲ್ ಫೈನಲ್​ ಪಂದ್ಯದಲ್ಲಿ ಭಾರತದ ದಾಳಿಗೆ ಶ್ರೀಲಂಕಾ ನಲುಗಿ ಹೋಗಿ ಐವತ್ತೇ ರನ್​ಗಳಲ್ಲಿ ಆಲೌಟ್ ಆಗಿದೆ.

    ಅದರಲ್ಲೂ ಭಾರತದ ವೇಗಿ ಮೊಹಮ್ಮದ್​ ಸಿರಾಜ್​ ಒಂದೇ ಓವರ್​ನಲ್ಲಿ ನಾಲ್ಕು ವಿಕೆಟ್​ ಪಡೆಯುವ ಮೂಲಕ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 50 ವಿಕೆಟ್​ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟಿಗ ಸಿರಾಜ್​ಗೆ ದೆಹಲಿ ಪೊಲೀಸರು ಮೆಚ್ಚುಗೆ ಸೂಚಿಸಿರುವುದು ಗಮನ ಸೆಳೆದಿದೆ. ಸಿರಾಜ್ ಅವರ ಅತಿವೇಗಕ್ಕೆ ಇಂದು ಯಾವುದೇ ದಂಡವಿಲ್ಲ ಎಂದು ದೆಹಲಿ ಪೊಲೀಸರು ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಇಂಗ್ಲಿಷ್​ನಲ್ಲಿ ಪೋಸ್ಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನ ಸೆಳೆದಿದ್ದು, ಅವರ ಪೋಸ್ಟ್​ಗೂ ಭರ್ಜರಿ ಮೆಚ್ಚುಗೆ ಸಿಕ್ಕಿದೆ.

    ಪೊಲೀಸ್ ‘ಪೋಸ್ಟ್​’ಗಳಲ್ಲೂ ಕ್ರಿಯೇಟಿವಿಟಿ; ಇಂಪ್ರೆಸ್​ ಆಗುವಂತೆ ‘ಎಕ್ಸ್​’ಪ್ರೆಸ್ ಮಾಡುತ್ತಿರುವ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts