ಸಲ್ಮಾನ್​​ನನ್ನು ಮುಗಿಸಿಬಿಡಬೇಕಿತ್ತು, ಕೊಲ್ಲಲು ಮಾಡಿದ್ದ ಪ್ರಯತ್ನ ಒಂದೆರಡಲ್ಲ, ಗ್ಯಾಂಗ್​ಸ್ಟರ್ ಹೇಳಿಕೆಯಿಂದ ಪೊಲೀಸರೇ ಶಾಕ್!

Salman lawrence
Published on

ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣದ ಬಳಿಕ ಸಲ್ಮಾನ್ ಖಾನ್​ನನ್ನು ಕೊಲ್ಲಲು ಹಲವು ಬಾರಿ ಪ್ರಯತ್ನಿಸಿದ್ದೇ ಎಂದಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಮತ್ತೊಂದು ಶಾಕಿಂಗ್​ ಹೇಳಿಕೆಯನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

2018ರಲ್ಲೇ ಸಲ್ಮಾನ್​ನನ್ನು ಮುಗಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆ, ಅದಕ್ಕೆಂದೇ ಬರೋಬ್ಬರಿ 4 ಲಕ್ಷ ರೂ.ಬೆಲೆಯ ಬಂದೂಕನ್ನು ಕೂಡ ಖರೀದಿಸಿದ್ದೆ ಎನ್ನುವ ಮೂಲಕ ಬಿಷ್ಣೋಯಿ ರೂಪಿಸಿದ್ದ ಸಂಚು ಕುರಿತು ಮತ್ತಷ್ಟು ಬಯಲಾಗಿದೆ.

ತನ್ನ ಒಂದೊಂದೇ ತಪ್ಪನ್ನು ಒಪ್ಪಿಕೊಳ್ಳುತ್ತಿರುವ ಬಿಷ್ಣೋಯಿ, ಮೊದಲ ಗುರಿ ಸಲ್ಮಾನ್​ ಖಾನ್​ ಅವರೇ ಆಗಿದ್ದರು, ಅವರನ್ನು ತುಂಬಾ ದ್ವೇಷಿಸುತ್ತೇನೆ ಎಂದು ಈ ಹಿಂದಿನ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ.

ಸದ್ಯ ಪಂಜಾಬ್​ನ ಖ್ಯಾತ ಗಾಯಕರಾಗಿದ್ದ ಸಿಧು ಮೂಸೇವಾಲ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಈ ನಡುವೆ ಸಲ್ಮಾನ್​ ಖಾನ್ ಹತ್ಯೆಗೂ ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು. ಸದ್ಯ ಈ ಎರಡೂ ಪ್ರಕರಣದಲ್ಲಿ ಆರೋಪಿಯಾಗಿರುವ ಲಾರೆನ್ಸ್ ವಿಚಾರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net