ಶ್ರೀಲಂಕಾ ಬಿಕ್ಕಟ್ಟು: ದುಬೈಗೆ ಪರಾರಿಯಾದ್ರಾ ಅಧ್ಯಕ್ಷ ಗೋತಬಯ ರಾಜಪಕ್ಸ?

Gotabaya
Published on

ಕೊಲಂಬೋ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ನಡುವೆ ರಾಜಕೀಯ ಅಸ್ಥಿರತೆಯೂ ಉಲ್ಬಣಿಸಿದ್ದು, ಒಬ್ಬೊಬ್ಬರಾಗಿ ನಾಯಕರು ದೇಶವನ್ನು ತೊರೆಯುತ್ತಿರುವ ಪರಿಸ್ಥಿತಿ ಲಂಕೆಗೆ ಬಂದೊದಗಿದೆ.

ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಸಹೋದರ ಹಾಗೂ ಮಾಜಿ ಹಣಕಾಸು ಸಚಿವರಾಗಿದ್ದ ಬಸಿಲ್​ ರಾಜಪಕ್ಸ ಈಗಾಗಲೇ ದುಬೈಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬೆನ್ನಲ್ಲೇ ರಾಷ್ಟ್ರಪತಿ ಗೋತಬಯ ರಾಜಪಕ್ಸ ಕೂಡ ದುಬೈಗೆ ಪರಾರಿಯಾಗುವ ಯತ್ನದಲ್ಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ  ದೇಶ ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.  ಸೋಮವಾರವೇ ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸಿಲ್​ ರಾಜಪಕ್ಸ ವಿಐಪಿ ಟರ್ಮಿನಲ್​ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ದುಬೈಗೆ ಹಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋತಬಯ ರಾಜಪಕ್ಸ ದೇಶದಲ್ಲೇ ಇರುವ ಬಗ್ಗೆ ಅಧ್ಯಕ್ಷರ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಹಲವಾರು ಸ್ಥಳೀಯ ಮಾಧ್ಯಮ ವರದಿಗಳು ಅವರು ಸೋಮವಾರವೇ ದುಬೈಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈವರೆಗೂ ರಾಷ್ಟ್ರಪತಿಯವರು ದೇಶವನ್ನು ತೊರೆದಿರುವ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net