ಮದುವೆಯಾಗಬೇಕಿದ್ದ ಹುಡುಗನೊಟ್ಟಿಗೆ ತಿರುಗಾಡಲು ಹೋದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ| Physical Assault

rape
ಸಾಂದರ್ಭಿಕ ಚಿತ್ರ
Published on

ಭೋಪಾಲ್‌: ದಲಿತ ಯುವತಿಯೊಬ್ಬಳ ಮೇಲೆ ಐವರು ಪುರುಷರು ಸಾಮೂಹಿಕ ಅತ್ಯಾಚಾರವೆಸಗಿದ ಭೀಕರ ಘಟನೆ ಮಧ್ಯ ಪ್ರದೇಶದ ಸಿಧಿ ಜಿಲ್ಲೆಯ ಚುರ್ಹತ್ ಕಾಡಿನಲ್ಲಿ ನಡೆದಿದೆ.

ಕಾಡಿನ ಹಾದಿಯಲ್ಲಿ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ, ಐದು ಪುರುಷರು ಅವರ ಮೇಲೆ ಹೊಂಚು ಹಾಕಿದ್ದು, ಈಕೆಯ ಜತೆ ಇದ್ದ ಹುಡುಗನಿಗೆ ಕೋಲಿನಿಂದ ತಲೆಗೆ ಹೊಡೆದು, ಮಹಿಳೆಯನ್ನು ಕಾಡಿನ ಒಳಗಡೆ ಎಳೆದೊಯ್ದಿದ್ದಾರೆ. ಕಾಡಿನಿಂದ ಮಹಿಳೆ ಅಳುತ್ತಾ, ಹತ್ತಿರದ ಹಳ್ಳಿಯನ್ನು ತಲುಪಿ, ಅಲ್ಲಿದ್ದ ಕಾರ್ಮಿಕರಿಗೆ ತನ್ನ ಕಷ್ಟವನ್ನು ವಿವರಿಸಿದ್ದಾಳೆ. ನಂತರ ಅವಳ ಹುಡುಗನ ಜತೆ ಸ್ಥಳೀಯ ಪೊಲೀಸರ ಬಳಿಗೆ ಬಂದು ದೂರು ನೀಡಿದ್ದಾರೆ. ಇಬ್ಬರ ದೂರಿನ ಮೇರೆಗೆ ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು ಚಿಕಿತ್ಸೆಗಾಗಿ ಸೆಮಾರಿಯಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ವಿಚಾರ ತಿಳಿದ ಪೊಲೀಸರ ತಂಡ ಶೀಘ್ರದಲ್ಲೇ ಸ್ಥಳಕ್ಕೆ ತಲುಪಿ, ರಕ್ತದ ಕಲೆಗಳಿರುವ ಟವಲ್ ಮತ್ತು ಹಲ್ಲೆಯ ಚಿಹ್ನೆಗಳು ಕಾಡಿನೊಳಗೆ ಪತ್ತೆ ಹಚ್ಚಿದೆ. ರಾತ್ರಿಯಿಡೀ ಹತ್ತಿರದ ಗ್ರಾಮಗಳಲ್ಲಿ ಶಂಕಿತರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಯುವತಿ ತಾನು ಮದುವೆಯಾಗಬೇಕಿದ್ದ ಹುಡುಗನ ಜತೆ ವಿಹಾರಕ್ಕೆ ಹೋಗಿದ್ದಾಗ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಆಕೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಾಮೂಹಿಕ ಅತ್ಯಾಚಾರದಲ್ಲಿ ಐದು ಜನ ಭಾಗಿಯಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅರವಿಂದ್ ತಿಳಿಸಿದ್ದಾರೆ.

(ಏಜೆನ್ಸೀಸ್)

ನನ್ನನ್ನು ಬಿಟ್ಟುಬಿಡುವಂತೆ ಅವರನ್ನು ಬೇಡಿಕೊಂಡೆ, ಆರೋಪಿಗಳ ಪಾದಗಳನ್ನು ಹಿಡಿದು ಗೋಳಾಡಿಕೊಂಡೆ. ಆದರೆ ಅವರು ಯಾವುದೇ ಪಶ್ಚಾತ್ತಾಪವನ್ನು ತೋರಿಸಲಿಲ್ಲ ಎಂದು ಮಹಿಳೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇಬ್ಬರು ಪುರುಷರು ತನ್ನ ಸ್ನೇಹಿತನನ್ನು ತಡೆದರೆ, ಉಳಿದ ಮೂವರು ಸರದಿಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಘಟನೆಯ ಬಗ್ಗೆ ಮಾತನಾಡಲು ಧೈರ್ಯ ಮಾಡಿದರೆ ಇಬ್ಬರನ್ನೂ ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ದಾಳಿಕೋರರು ಅವರ ಮೊಬೈಲ್ ಫೋನ್‌ಗಳನ್ನು ಸಹ ಕಸಿದುಕೊಂಡರು ಕಾಡಿನಲ್ಲಿ ಪರಾರಿಯಾದರು ಎಂದು ಆರೋಪಿಸಿದ್ದಾರೆ. ಪೊಲೀಸರು ಇನ್ನಿಬ್ಬರ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net