'ಗೇಮ್​ ಚೇಂಚರ್'​ ಸಿನಿಮಾ HD ಪೈರಸಿ.. 35 ಜನರ ವಿರುದ್ಧ ಪ್ರಕರಣ ದಾಖಲು: ಸಿನಿಮಾ ಮಂದಿ ಕೈವಾಡ ಶಂಕೆ | Game Changer

dk (3)
Published on

ಹೈದರಾಬಾದ್​: ರಾಮ್​ ಚರಣ್ ಮತ್ತು ​​ಕಿಯಾರ ಅಡ್ವಾಣಿ ಅಭಿನಯದ ಚೇಂಚರ್​ ಗೇಮ್(Game Changer) ಸಿನಿಮಾ​ ಇದೇ ಜ.10ರಂದು ಬಿಡುಗಡೆಯಾಗಿದೆ. ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ ಚಿತ್ರ ಪೈರಸಿ(ನಕಲಿ)ಯಾಗಿದೆ ಎಂದು ಚಿತ್ರತಂಡ ದೂರಿದ್ದು, ಪೈರಸಿ ಮಾಡಿದವರ ವಿರುದ್ದ ಇದೀಗ ಎಫ್​ಐಆರ್​ ದಾಖಲಾಗಿದೆ.

ಗೇಮ್​ ಚೇಂಚರ್​ ಸಿನಿಮಾ ತಮಿಳಿನ ಶಂಕರ್​ ರ್ನಿರ್ದೇಶನ ಮಾಡಿದ್ದಾರೆ. ದೊಡ್ಡ ಬಜೆಟ್​ನ ಚಿತ್ರ ಇದಾಗಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಪೈರಸಿಯಾಗಿದೆ. ಅಲ್ಲದೆ. ಬಿಡುಗಡೆಗೊಂಡ ಕೆಲ ದಿನಗಳಲ್ಲಿಯೇ ಎಚ್​ಡಿ ಪ್ರಿಂಟ್​ ಫುಲ್​ ಸಿನಿಮಾ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ ಎಂದು ಚಿತ್ರತಂಡ ದೂರಿದೆ. ಫುಲ್​ ಸಿನಿಮಾವನ್ನು ಯುಟ್ಯೂಬ್​ನಲ್ಲಿ ಲೀಕ್​ ಮಾಡಲಾಗಿದೆ. ದೊಡ್ಡ ಗಾತ್ರದ ಸಿನಿಮಾಗಳಿಗೆ ದೊಡ್ಡ ಬಜೆಟ್​ ಹಾಕಿದ್ದೇವೆ. ಆದರೆ. ಇಂತಹ ಕೃತ್ಯಗಳಿಂದ ಚಿತ್ರಗಳು ನಷ್ಟ ಆಗಲಿವೆ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿದೆ.

ಸಿನಿಮಾ ಬಿಡುಗಡೆ ಮುನ್ನವೇ ಹಲವರು ಪೈರಸಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ಪೈರಸಿ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

45 ಜನರ ವಿರುದ್ದ ಪ್ರಕರಣ ದಾಖಲು

ಈ ಪೈರಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೈಬರ್​ ಕ್ರೈಮ್​ ಪೊಲೀಸರಿಗೆ ಚಿತ್ರತಂಡ, ಇದೀಗ 45 ಜನರ ವಿರುದ್ದ ಎಫ್​ಐಆರ್ ದಾಖಲು ಮಾಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 45 ಜನರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಅಲ್ಲದೆ, ಈ ತಂಡದಲ್ಲಿ 45 ಜನರಷ್ಟೇ ಇದ್ದಾರೆಯೇ ಅಥವಾ ಯಾರ ಕೈವಾಡ ಇದಿಯೇ ಎಂದು ತನಿಖೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​​) ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net