ನವದೆಹಲಿ: ಯುವರಾಜ್ ಸಿಂಗ್ ತಂದೆ ಯೋಗಾರಾಜ್ ಟೀಮ್ ಇಂಡಿಯಾದ ಮಾಜಿ ಆಟಗಾರ ಕಪಿಲ್ ದೇವ್ ವಿರುದ್ಧ ‘ ಪಿಸ್ತೂಲ್ ನಿನ್ನ(ಕಪಿಲ್ ದೇವ್) ತಲೆಗೆ ಗುಂಡು ಹಾರಿಸಬೇಕಂತಲೇ ನಾನಿಲ್ಲಿಗೆ ಬಂದೆ’ ಎಂಬ ಹೇಳಿಕೆಗೆ ಇದೀಗ ಕಪಿಲ್ದೇವ್ ಪ್ರತಿಕ್ರಿಯಿಸಿದ್ದಾರೆ.
ಹೌದು, ಯೋಗರಾಜ್ ಅವರು 1980ರ ಡಿಸೆಂಬರ್ 21ರಂದು ಬ್ರಿಸ್ಟೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದರು. ಈ ವೇಳೆ ಸುನಿಲ್ ಗವಾಸ್ಕರ್ ಅವರು ತಂಡದ ನಾಯಕರಾಗಿದ್ದರು. ಮೂರು ತಿಂಗಳಿಗಿಂತ ಕಡಿಮೆ ಅವಧಿಯ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಯೋಗರಾಜ್ ಅವರು ಭಾರತಕ್ಕಾಗಿ ಒಂದು ಟೆಸ್ಟ್ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದರು. ಕಪಿಲ್ ದೇವ್ ಅವರು ನಾಯಕರಾಗಿ ಆಯ್ಕೆಯಾದ ಬಳಿಕ ಯೋಗರಾಜ್ ಅವರು ಅವಕಾಶ ನೀಡಲಿಲ್ಲ ಎಂಬ ಅಪವಾದ ಇದೆ. ಈ ಕಾರಣಕ್ಕೆ ಯೋಗರಾಜ್ ಅವರು ಕಪಿಲ್ ಕುರಿತು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನುಓದಿ:Bagalkote: ರಾಜಸ್ಥಾನದಲ್ಲಿ ಕರ್ತವ್ಯನಿರತರಾಗಿದ್ದ ಬಾಗಲಕೋಟೆಯ ಯೋಧ ಹೃದಯಾಘಾತದಿಂದ ಸಾವು
ಸೋಶಿಯಲ್ ಮೀಡಿಯಾ ಇನ್ನು ಯೆನ್ಸರ್ ಸಮದೀಶ್ ಭಾಟಿಯಾ ಅವರು ನಡೆಸಿಕೊಡುವ “ಅನ್‌ಫಿಲ್ಟರ್ಡ್ ಬೈ ಸಮದೀಶ್” ಹೆಸರಿನ ಸಂದರ್ಶನದಲ್ಲಿ ಭಾಗವಹಿಸಿದ ಯೋಗರಾಜ್, ”ನನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ನನ್ನ ಪತ್ನಿ (ಯುವಿಯ ತಾಯಿ) ಕಪಿಲ್ ಬಳಿ ಕೆಲ ಪ್ರಶ್ನೆಗಳನ್ನು ಕೇಳಲು ಬಯಸಿದ್ದರು. ಆದರೆ, ಆ ವ್ಯಕ್ತಿಗೆ ನಾನೇ ಪಾಠ ಕಲಿಸುತ್ತೇನೆಂದು ಹೇಳಿ, ನನ್ನ ಪಿಸ್ತೂಲನ್ನು ತೆಗೆದುಕೊಂಡು ಸೆಕ್ಟರ್ 9ರಲ್ಲಿರುವ ಕಪಿಲ್ ಮನೆಗೆ ಹೋದೆ.ಈ ವೇಳೆ ನಾನು ಕಪಿಲ್‌ರನ್ನು ಹತ್ತಾರು ಬಾರಿ ನಿಂದಿಸಿದೆ. ನಿನ್ನಿಂದಾಗಿ ನಾನೊಬ್ಬ ಸ್ನೇಹಿತನನ್ನು ಕಳೆದುಕೊಂಡೆ ಮತ್ತು ನೀನು ಏನು ಮಾಡಿದೆಯೋ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದೆ” ಎಂದಿದ್ದಾರೆ.
ಇದನ್ನುಓದಿ:ನಂಬಲು ಅಸಾಧ್ಯ! ಆದ್ರೆ, ಇದೇ ಕಟು ಸತ್ಯ: ಕೆಟ್ಟ ಪರಿಸ್ಥಿತಿ ನೆನೆದು ಹೆಸರಾಂತ ನಿರ್ದೇಶಕ ಕಣ್ಣೀರು | Cult Director
ನಿನ್ನ ತಲೆಗೆ ಗುಂಡು ಹಾರಿಸಬೇಕಂತಲೇ ನಾನಿಲ್ಲಿಗೆ ಬಂದೆ ಆದರೆ, ಧರ್ಮನಿಷ್ಠೆ ಇರುವ ನಿಮ್ಮ ತಾಯಿ ಇಲ್ಲಿದ್ದಾರೆ. ಹಾಗಾಗಿ ನಾನು ಅಂದುಕೊಂಡಿದನ್ನು ಮಾಡುತ್ತಿಲ್ಲ ಎಂದು ಕಪಿಲ್‌ಗೆ ಹೇಳಿದೆ. ನಾನು ಆ ಕ್ಷಣವೇ ಕ್ರಿಕೆಟ್ ಆಡುವುದಿಲ್ಲ ಎಂಬ ನಿರ್ಧಾರಕ್ಕೂ ಬಂದೆ. ಇನ್ಮುಂದೆ ನನ್ನ ಬದಲಾಗಿ ಯುವಿ ಆಡುತ್ತಾನೆಂದು ಅಂದೇ ನಿರ್ಧರಿಸಿದೆ ಎಂದು ಯೋಗರಾಜ್ ಹೇಳಿದ್ದಾರೆ.
ಇದೀಗ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಪಿಲ್ದೇವ್ ಸುದ್ದಿಗಾಗರರ ಜತೆ ಮಾತನಾಡಿದ್ದು, ”ಯಾರೀ ಈ ಯೋಗರಾಜ್ ಸಿಂಗ್” ಎಂದು ಕೇಳಿದ್ದಾರೆ. ಮುಂದಿನ ಪ್ರಶ್ನೆ ಕೇಳುವಷ್ಟರಲ್ಲಿ ಕಪಿಲ್ ಮುಂದೆ ಸಾಗಿದ್ದಾರೆ. ಇದೀಗ ಈ ಹೇಳಿಕ ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗಿದೆ.
ಇದನ್ನುಓದಿ:ಟೆಸ್ಟ್ ಪಂದ್ಯಗಳಲ್ಲಿ ಸರಣಿ ಸೋಲು: ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬಿಗ್ ಶಾಕ್! BCCI
ಅಂದಹಾಗೆ ಯೋಗರಾಜ್ ಅವರ ವಿವಾದಾತ್ಮಕ ಹೇಳಿಕೆಗಳು ಇದೇ ಮೊದಲಲ್ಲ, ಈ ಹಿಂದೆ ಧೋನಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ನನ್ನ ಮಗ ಯುವಿಯನ್ನು ತಂಡದಿಂದ ಕೈಬಿಡಲು ಧೋನಿಯೇ ಕಾರಣ ಎಂದು ಆರೋಪಿಸಿದ್ದರು. (ಏಜೆನ್ಸಿಸ್)