blank

ನಂಬಲು ಅಸಾಧ್ಯ! ಆದ್ರೆ, ಇದೇ ಕಟು ಸತ್ಯ: ಕೆಟ್ಟ ಪರಿಸ್ಥಿತಿ ನೆನೆದು ಹೆಸರಾಂತ ನಿರ್ದೇಶಕ ಕಣ್ಣೀರು | Cult Director

blank

Cult Director: ತಮ್ಮ ಮುಂಬರುವ ಸಿನಿಮಾಗಳು, ಕಲಾವಿದರು ಅಥವಾ ಉದ್ಯಮದಲ್ಲಿನ ಬೆಳವಣಿಗೆಗಳ ಬಗ್ಗೆ ಮಾತನಾಡದ ತಮಿಳು ಚಿತ್ರರಂಗದ ಕಲ್ಟ್ ನಿರ್ದೇಶಕ ಗೌತಮ್ ವಾಸುದೇವ್ ಮೆನನ್, ತಾವಿರುವ ಕಠಿಣ ಪರಿಸ್ಥಿತಿ ಮತ್ತು ಚಿತ್ರರಂಗದಿಂದ ದೊರೆಯದ ಸಹಾಯ ಕುರಿತು ಕಡೆಗೂ ಮೌನ ಮುರಿದಿದ್ದಾರೆ. ಬಹಿರಂಗವಾಗಿ ತಾವು ಅನುಭವಿಸುತ್ತಿರುವ ದುಃಖವನ್ನು ಜನರೊಂದಿಗೆ ಹಂಚಿಕೊಂಡ ನಿರ್ದೇಶಕ, ನನ್ನ ಸಹಾಯಕ್ಕೆ ಯಾರೂ ಇಲ್ಲ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಬೀದಿಗೆ ಬಂದ ಕಾಂಗ್ರೆಸ್ ನ ಅಧಿಕಾರ ಹಂಚಿಕೆಯ ಒಳ ಜಗಳ: ವಿಜಯೇಂದ್ರ ವ್ಯಂಗ್ಯ |Siddaramaiah govt utterly flap

ಪ್ರಸ್ತುತ ದಿನಗಳಲ್ಲಿ ತೀರ ಆರ್ಥಿಕ ಬಿಕ್ಕಟ್ಟು ಹಾಗೂ ಇನ್ನಿತರ ಸವಾಲುಗಳನ್ನು ಎದುರಿಸುತ್ತಿರುವ ನಿರ್ದೇಶಕರು, ತಾವೇ ನಿರ್ದೇಶಿಸಿರುವ ಸಿನಿಮಾಗಳನ್ನು ರಿಲೀಸ್ ಮಾಡಲು ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ಎದುರಾಗಿದೆ. ಇದೆಲ್ಲದರಿಂದ ಕಂಗೆಟ್ಟಿರುವ ಅವರು, “ನಿಮಗೆ ಬೇಕು ಅನಿಸಿದಾಗ ಅಥವಾ ಸಹಾಯ ಹಸ್ತದ ಅಗತ್ಯವಿರುವಾಗ ಯಾರೂ ನಿಮ್ಮನ್ನು ಭೇಟಿಯಾಗಲು ಇಚ್ಛಿಸುವುದಿಲ್ಲ, ಕೈಗೆ ಸಿಗಲು ಮುಂದೆ ಬರುವುದಿಲ್ಲ” ಎಂದು ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮುಕ್ತವಾಗಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡ ಮೆನನ್​, “ಇದನ್ನು ಹೇಳುವುದೇ ಅತ್ಯಂತ ದುಃಖಕರ ಸಂಗತಿ. ಉದ್ಯಮದಲ್ಲಿ ಯಾರೂ ನನಗೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಇದು ನಂಬಲು ಅಸಾಧ್ಯ ಅನಿಸಿದರೂ ಇದೇ ಕಟು ಸತ್ಯ. ನಾನಿನ್ನು ಈ ಉದ್ಯಮದಲ್ಲಿ ಉಳಿದಿದ್ದೇನೆ ಎಂದರೆ ಅದಕ್ಕೆ ಸಿನಿ ಪ್ರೇಕ್ಷಕರೇ ಕಾರಣ. ಅವರಿನ್ನು ನನ್ನ ಚಿತ್ರಗಳನ್ನು ನೋಡುವ ಮನಸ್ಥಿತಿ, ಆಸೆ ಇಟ್ಟುಕೊಂಡಿರುವುದರಿಂದಲೇ ಇನ್ನೂ ಬದುಕುಳಿದಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: ಈ ರಾಶಿಯ ಜನರು ಯಾರಿಗೋಸ್ಕರನೂ ತಮ್ಮ ಈ ಗುಣವನ್ನು ಎಂದಿಗೂ ಬಿಟ್ಟುಕೊಡಲ್ಲ! ನಿಮ್ಮ ಬಗ್ಗೆ ಹೇಗೆ? Zodiac Sign

ತಮ್ಮ ನಿರ್ದೇಶನದಲ್ಲಿ ತಯಾರಾದ ವಿಕ್ರಮ್ ನಟಿಸಿದ ‘ಧ್ರುವ ನಚ್ಚಥಿರಂ’ ಬಿಡುಗಡೆಯೂ ಇದೀಗ ತಡೆಯಲ್ಲಿದೆ. ಏಳು ವರ್ಷಗಳ ಹಿಂದೆಯೇ ಚಿತ್ರವನ್ನು ಪೂರ್ಣಗೊಳಿಸಿದ್ದರೂ ಸಹ ಆರ್ಥಿಕ ಅಡಚಣೆಗಳು ಸಿನಿಮಾ ರಿಲೀಸ್​ಗೆ ದೊಡ್ಡ ಅಡ್ಡಗಲ್ಲಾಗಿ ನಿಂತಿರುವುದು ಅವರ ಕಣ್ಣೀರಿಗೆ ಒಂದು ಪ್ರಮುಖ ಕಾರಣ. ತಾನು ಎದುರಿಸುತ್ತಿರುವ ಕಷ್ಟಗಳನ್ನು ಬಗೆಹರಿಸಲು ಚಿತ್ರರಂಗದ ಯಾರೊಬ್ಬರೂ ಕಾಳಜಿ ಅಥವಾ ಆಸಕ್ತಿ ತೋರುತ್ತಿಲ್ಲ ಎಂದು ಗೌತಮ್ ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).

BBK11: ‘ಬಿಗ್’ ಫಿನಾಲೆ ವೇದಿಕೆ ಹತ್ತಿದ ಹನುಮಂತು​! ಹಳ್ಳಿ ಹೈದನ ಜತೆಗೆ ಈ ನಾಲ್ವರು ಟ್ರೋಫಿ ಸೆಣಸಾಟಕ್ಕೆ?

Share This Article

ಏಳನೇ ತಿಂಗಳಲ್ಲಿ ಹೆರಿಗೆಯಾದರೆ ಏನಾಗುತ್ತದೆ?; ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮವೇನು.. ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಇಟ್ಟುಕೊಳ್ಳುವುದು ಮುಖ್ಯ ಎಂದು ವೈದ್ಯರು ಸೇರಿದಂತೆ ಎಲ್ಲಾ ತಜ್ಞರು…

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಬೇಕೇ?; ಅಡುಗೆಮನೆಯಲ್ಲಿನ ಈ 2 ವಸ್ತುಗಳನ್ನು ತಪ್ಪದೆ ಬಳಸಿ | Health Tips

ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ…

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…