

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳಲ್ಲಿನ ಅಸಮತೋಲನದಿಂದ ಗ್ರಹಗಳು ಒಟ್ಟಿಗೆ ಸೇರಿದಾಗ ಕೆಲವು ಯೋಗಗಳು ರೂಪುಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ರೂಪುಗೊಳ್ಳುವ ಅಪರೂಪದ ಯೋಗಗಳ ಪ್ರಭಾವವು ಎಲ್ಲ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಅಂದಹಾಗೆ ಚಂದ್ರನು ತನ್ನ ಸ್ಥಾನವನ್ನು ವೇಗವಾಗಿ ಬದಲಾಯಿಸುವ ಗ್ರಹ. ಚಂದ್ರನು ಒಂದು ರಾಶಿಯಲ್ಲಿ ಎರಡೂವರೆಗೆ ದಿನಗಳ ಕಾಲ ಮಾತ್ರ ಇರುತ್ತಾನೆ. ಚಂದ್ರ ಕರ್ಕಾಟಕ ರಾಶಿಯ ಅಧಿಪತಿ. ಈ ಚಂದ್ರನು ಏಪ್ರಿಲ್ 2ರಂದು ವೃಷಭ ರಾಶಿಗೆ ಹೋಗುತ್ತಾನೆ. ಗುರು ಈಗಾಗಲೇ ವೃಷಭ ರಾಶಿಯಲ್ಲಿ ಸಾಗುತ್ತಿದ್ದಾನೆ.
ವೃಷಭ ರಾಶಿಯಲ್ಲಿ ಚಂದ್ರ ಮತ್ತು ಗುರುವಿನ ಸಂಯೋಗವು ಗಜಕೇಸರಿ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ಯೋಗದಿಂದ ಕೆಲವು ರಾಶಿಗಳಿಗೆ ಒಳ್ಳೆಯದಾಗಲಿದೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವೃಷಭ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ಇದರಿಂದ ಸಮಾಜದಲ್ಲಿ ನೀವು ಗೌರವಾನ್ವಿತ ವ್ಯಕ್ತಿಯಾಗುತ್ತೀರಿ. ಉನ್ನತ ಅಧಿಕಾರದಲ್ಲಿರುವ ಜನರೊಂದಿಗೆ ಸ್ನೇಹವನ್ನು ಸುಲಭವಾಗಿ ಗಳಿಸಬಹುದು. ಅಲ್ಲದೆ, ಹಣ ಗಳಿಸುವ ಅವಕಾಶವನ್ನು ಹೊಂದಿರುತ್ತೀರಿ. ಉದ್ಯಮಿಗಳು ಭಾರಿ ಲಾಭ ಗಳಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಹಲವು ಪಟ್ಟು ಸಂತೋಷ ಹೆಚ್ಚಾಗುತ್ತದೆ.
ಕರ್ಕಾಟಕ ರಾಶಿಯ 11ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ಉಂಟಾಗಲಿದೆ. ನಿಮಗೆ ಬರುವ ಆದಾಯ ಹಲವು ಪಟ್ಟು ಹೆಚ್ಚಾಗುತ್ತದೆ. ಉದ್ಯಮಿಗಳು ಉತ್ತಮ ಬೆಳವಣಿಗೆ ಕಾಣುತ್ತಾರೆ ಮತ್ತು ಲಾಭ ಗಳಿಸುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಅವಕಾಶಗಳು ನಿಮಗೆ ಒದಗಿ ಬರುವಾಗ ಅವುಗಳನ್ನು ಬಳಸಿಕೊಳ್ಳಬೇಕು. ನೀವು ಮೊದಲು ಹೂಡಿಕೆ ಮಾಡಿದ ಹಣವನ್ನು ಈಗ ನೀವು ಮರಳಿ ಪಡೆಯುತ್ತೀರಿ.
ಸಿಂಹ ರಾಶಿಯ 10ನೇ ಮನೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ನಿಮ್ಮ ವ್ಯವಹಾರ ಮತ್ತು ಕೆಲಸದಲ್ಲಿ ಪ್ರಗತಿ ಇರುತ್ತದೆ. ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಸಂಬಳದೊಂದಿಗೆ ಅಪೇಕ್ಷಿತ ಉದ್ಯೋಗ ಸಿಗುತ್ತದೆ. ನೀವು ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅವಕಾಶಗಳು ನಿಮ್ಮ ದಾರಿಗೆ ಬರುತ್ತವೆ. ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ನಿಮಗೆ ಸಂಬಳ ಏರಿಕೆ ಸಿಗುತ್ತದೆ. ಬೇರೆ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಕೆಲಸ ಮತ್ತು ಉತ್ತಮ ಸಂಬಳ ಸಿಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.