

ನವದೆಹಲಿ: ಮಾನವ ಬುದ್ಧಿಗೆ ಚುರುಕು ಮುಟ್ಟಿಸುವಂತಹ ಕೆಲವು ಟಾಸ್ಕ್ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಚಿತ್ರಗಳಲ್ಲಿ ಪ್ರಾಣಿಗಳನ್ನು ಗುರುತಿಸುವ ಟಾಸ್ಕ್ ಸಹ ಅವುಗಳಲ್ಲಿ ಒಂದು. ಅದರಲ್ಲೂ ಕರೊನಾ ಲಾಕ್ಡೌನ್ ಸಮಯದಲ್ಲಿ ಇಂತಹ ಟಾಸ್ಕ್ಗಳು ಹೆಚ್ಚಾಗಿದ್ದು, ಅದರ ಒಂದು ಝಲಕ್ ನೀವಿಲ್ಲಿ ನೋಡಬಹುದು.
ಪರಿಸರದೊಂದಿಗೆ ಪ್ರಾಣಿಗಳು ಸಹ ಬೆರತು ಹೋಗಿ ಕಣ್ಣಿಗೆ ಕಾಣದೇ, ಸೂಕ್ಷ್ಮವಾಗಿ ಹುಡುಕಾಡಿದಾಗ ಗೋಚರವಾಗುವಂತಹ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವುಗಳಲ್ಲಿ ಇಲ್ಲಿಯವರೆಗೂ ಜಾಲತಾಣದಲ್ಲಿ ಭಾರಿ ಹವಾ ಸೃಷ್ಟಿಸಿದ ಫೋಟೋಗಳು ಯಾವುವು ಎಂಬುದನ್ನು ನಾವಿಲ್ಲಿ ಕಾಣಬಹುದಾಗಿದೆ.
ಕೆಳಗೆ ಕಾಣುತ್ತಿರುವ ಸರಳ ದೃಷ್ಟಿಯುಳ್ಳ ಪರಿಸರ ಚಿತ್ರದಲ್ಲಿ ಒಂದು ಹಾವು ಅಡಗಿಕೊಂಡಿದೆ. ಅದನ್ನು ನೀವು ಗುರುತಿಸುವಿರಾ?
ಹಾವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲವೇ? ಅದಕ್ಕಿಂತ ಸುಲಭವಾದ ಚಿತ್ರದಲ್ಲಿ ನೀವು ಶ್ವಾನವೊಂದನ್ನು ಪತ್ತೆ ಹಚ್ಚುವಿರಾ? ನಿಮ್ಮ ಸಮಯ ಈಗ ಆರಂಭವಾಗಿದೆ.
ನೀವು ಶ್ವಾನವನ್ನು ಪತ್ತೆ ಹಚ್ಚಿದ್ರೆ ನಿಮ್ಮ ಕಣ್ಣಿನ ತೀಕ್ಷ್ಣ ನೋಟಕ್ಕೊಂದು ಸಲಾಂ. ಒಂದು ವೇಳೆ ಸಾಧ್ಯವಾಗದೇ ಇದ್ದರೆ, ಉತ್ತರ ಕಂಡುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ಕಿಸಿ.
ಈ ಕೆಳಗಿನ ಮತ್ತೊಂದು ಚಿತ್ರದಲ್ಲಿ ಪರಭಕ್ಷಕ ಜೀವಿಯೊಂದು ಜಿಂಕೆಯನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದೆ. ಅದನ್ನಾದರೂ ಪತ್ತೆ ಹಚ್ಚಿರಿ.
ಈ ಕೆಳಗಿನ ಚಿತ್ರದಲ್ಲಿ ಒಂದು ಬೆಕ್ಕಿದೆ. ಅರಣ್ಯದೊಳಗೆ ಇರುವ ಫಿಶಿಂಗ್ ಬೆಕ್ಕು ಕೆರೆ ಹಾಗೂ ಕೊಳದ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಆಗಾಗ ಸ್ಮಿಮ್ಮಿಂಗ್ಗೆ ಇಳಿಯುವ ಬೆಕ್ಕುಗಳು ಮೀನುಗಳನ್ನು ಬೇಟೆಯಾಡುತ್ತವೆ.
ಈ ಚಿತ್ರದಲ್ಲಿ ಅನೇಕ ಹುಲಿಗಳಿವೆ. ಆದರೆ ಎಷ್ಟು ಹುಲಿಗಳಿವೆ ಎಂಬುದನ್ನು ನೀವು ಪತ್ತೆ ಹಚ್ಚಬೇಕು.
ಕೊನೆಯ ಚಿತ್ರವೂ ನೋಡಲು ಸರಳವಾಗಿ ಕಂಡರು ಅದರಲ್ಲಿ ಚಿರತೆ ಇರುವುದನ್ನು ಪತ್ತೆ ಹಚ್ಚಲು ಹೋಗಿ ಅನೇಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ನಿಮ್ಮ ಕೈಯಲ್ಲಿ ಅದು ಸಾಧ್ಯವಾಗುತ್ತೆ ಎನ್ನುವುದಾದರೆ ಒಮ್ಮೆ ಪ್ರಯತ್ನಿಸಿದೆ.