

ನವದೆಹಲಿ: ಕರೊನಾ ಲಾಕ್ಡೌನ್ ನಡುವೆ ಟ್ವಿಟರ್ನಲ್ಲಿ ಹರಿದಾಡುತ್ತಿರುವ ನೂತನ ಟಾಸ್ಕ್ ಒಂದು ಸಾಕಷ್ಟು ಕುತೂಹಲ ಕೆರಳಿಸಿದ್ದು, ಖಂಡಿತವಾಗಿಯೂ ಇದು ನಿಮ್ಮ ಗಮನವನ್ನು ಸೆಳೆಯುತ್ತಿದೆ.
ಬುಧವಾರ ಟ್ವಿಟರ್ ಬಳಕೆದಾರರು ಹುಲಿಗಳಿರುವ ಚಿತ್ರವನ್ನು ಶೇರ್ ಮಾಡಿ, ಎಷ್ಟು ಹುಲಿಗಳಿವೆ ಪತ್ತೆಹಚ್ಚಿ ಎಂದು ನೆಟ್ಟಿಗರನ್ನು ಕೇಳಿದ್ದಾರೆ. ನೀವು ನೋಡುತ್ತಿರುವ ಚಿತ್ರದಲ್ಲಿ ಎಷ್ಟು ಹುಲಿಗಳಿವೆ? ಎಂದು ಇಸಾರ್ಮನೀರ್ ಎಂಬ ಟ್ವಿಟರ್ ಬಳಕೆದಾರ ಪ್ರಶ್ನಿಸಿ ಚಿತ್ರವನ್ನು ಹರಿಬಿಟ್ಟಿದ್ದು, ಇದೀಗ ವೈರಲ್ ಆಗಿದೆ.
ಚಿತ್ರವನ್ನು ಸಾಮಾನ್ಯವಾಗಿ ನೋಡಿದರೆ ಕೇವಲ ನಾಲ್ಕು ಹುಲಿಗಳಿರುವುದು ಕಾಣುತ್ತದೆ. ಚಿತ್ರದಲ್ಲಿ ಎರಡು ವಯಸ್ಕ ಹಾಗೂ ಎರಡು ಹುಲಿ ಮರಿಗಳಿವೆ. ಆದರೆ, ಚಿತ್ರವನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ಹುಲಿಗಳು ಇರುವುದು ತಿಳಿಯುತ್ತದೆ.
ಟ್ವಿಟರ್ನಲ್ಲಿ ಸಂಚಲನ ಸೃಷ್ಟಿಸಿರುವ ಫೋಟೋ ಈವರೆಗು 5 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಗಿಟ್ಟಿಸಿಕೊಂಡಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಫೋಟೋ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಚ್ಚರಿಯೆಂದರೆ ಬಾಲಿವುಡ್ ಸಿನಿ ದಿಗ್ಗಜ ಅಮಿತಾಭ್ ಬಚ್ಚನ್ ಕೂಡ ಫೋಟೋ ಕುರಿತು ಪ್ರತಿಕ್ರಿಯೆ ನೀಡಿ 11 ಹುಲಿಗಳಿವೆ ಎಂದು ಟ್ವೀಟ್ ಮಾಡಿದ್ದಾರೆ.
ನಟಿ ದಿಯಾ ಮಿರ್ಜಾ ಕೂಡ ಟ್ವೀಟ್ ಮಾಡಿದ್ದು ಅಮಿತಾಭ್ ಬಚ್ಚನ್ಗಿಂತಲೂ 5 ಹುಲಿಗಳನ್ನು ಹೆಚ್ಚಿಗೆ ಪತ್ತೆ ಹಚ್ಚಿ 16 ಎಂದು ಹೇಳಿದ್ದಾರೆ. ಇನ್ನು ಕೆಲ ನೆಟ್ಟಿಗರು ಚಿತ್ರದಲ್ಲಿ 20 ಹುಲಿಗಳಿವೆ ಎಂದು ಗುರುತಿಸಿದ್ದಾರೆ. ಹೀಗೆ ಹಲವರು ಪ್ರತಿಕ್ರಿಯೆ ನೀಡುತ್ತಿದ್ದು, ನೀವೂ ಒಮ್ಮೆ ಟ್ರೈ ಮಾಡಬಹುದು. (ಏಜೆನ್ಸೀಸ್)