More

    ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರಗಳಲ್ಲಿರುವ ಪ್ರಾಣಿಗಳನ್ನು ಗುರುತಿಸಿದ್ರೆ ನಿಮಗೆ ಫುಲ್​ ಮಾರ್ಕ್ಸ್​!

    ನವದೆಹಲಿ: ಮಾನವ ಬುದ್ಧಿಗೆ ಚುರುಕು ಮುಟ್ಟಿಸುವಂತಹ ಕೆಲವು ಟಾಸ್ಕ್​ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಚಿತ್ರಗಳಲ್ಲಿ ಪ್ರಾಣಿಗಳನ್ನು ಗುರುತಿಸುವ ಟಾಸ್ಕ್​ ಸಹ ಅವುಗಳಲ್ಲಿ ಒಂದು. ಅದರಲ್ಲೂ ಕರೊನಾ ಲಾಕ್​ಡೌನ್​ ಸಮಯದಲ್ಲಿ ಇಂತಹ ಟಾಸ್ಕ್​ಗಳು ಹೆಚ್ಚಾಗಿದ್ದು, ಅದರ ಒಂದು ಝಲಕ್​ ನೀವಿಲ್ಲಿ ನೋಡಬಹುದು.

    ಇದನ್ನೂ ಓದಿ: ಇಂಥವರೂ ಇದ್ದಾರೆ: ಲಾಕ್​ಡೌನ್​ ಸಂತ್ರಸ್ತರ ನೆರವಿಗಾಗಿ ಚಿನ್ನ ಮಾರಿದ ದಂಪತಿ!

    ಪರಿಸರದೊಂದಿಗೆ ಪ್ರಾಣಿಗಳು ಸಹ ಬೆರತು ಹೋಗಿ ಕಣ್ಣಿಗೆ ಕಾಣದೇ, ಸೂಕ್ಷ್ಮವಾಗಿ ಹುಡುಕಾಡಿದಾಗ ಗೋಚರವಾಗುವಂತಹ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಅವುಗಳಲ್ಲಿ ಇಲ್ಲಿಯವರೆಗೂ ಜಾಲತಾಣದಲ್ಲಿ ಭಾರಿ ಹವಾ ಸೃಷ್ಟಿಸಿದ ಫೋಟೋಗಳು ಯಾವುವು ಎಂಬುದನ್ನು ನಾವಿಲ್ಲಿ ಕಾಣಬಹುದಾಗಿದೆ.

    ಕೆಳಗೆ ಕಾಣುತ್ತಿರುವ ಸರಳ ದೃಷ್ಟಿಯುಳ್ಳ ಪರಿಸರ ಚಿತ್ರದಲ್ಲಿ ಒಂದು ಹಾವು ಅಡಗಿಕೊಂಡಿದೆ. ಅದನ್ನು ನೀವು ಗುರುತಿಸುವಿರಾ?

    SPOT THE SNAKE!See if you can locate the Snake in this photoExtra points for anyone that can also successfully identify it!

    Snake Catcher Northern Rivers 24/7 ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಏಪ್ರಿಲ್ 8, 2020

    ಸಾಧ್ಯವಾಗಲಿಲ್ಲವೆಂದರೆ ಉತ್ತರವನ್ನು ಲಿಂಕ್ ಮೇಲೆ ಕ್ಲಿಕ್ಕಿಸಿ ತಿಳಿದುಕೊಳ್ಳಬಹುದು.

    ಹಾವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲವೇ? ಅದಕ್ಕಿಂತ ಸುಲಭವಾದ ಚಿತ್ರದಲ್ಲಿ ನೀವು ಶ್ವಾನವೊಂದನ್ನು ಪತ್ತೆ ಹಚ್ಚುವಿರಾ? ನಿಮ್ಮ ಸಮಯ ಈಗ ಆರಂಭವಾಗಿದೆ.

    ಇದನ್ನೂ ಓದಿ: ಕರೊನಾದಿಂದಾಗಿ ಕೆಲಸ ಹೋಯ್ತು; ಈಗ ನರೇಗಾದಲ್ಲಿ ಕೂಲಿ ಮಾಡ್ತಿದಾನೆ ಈ ಇಂಜಿನಿಯರ್!

    ನೀವು ಶ್ವಾನವನ್ನು ಪತ್ತೆ ಹಚ್ಚಿದ್ರೆ ನಿಮ್ಮ ಕಣ್ಣಿನ ತೀಕ್ಷ್ಣ ನೋಟಕ್ಕೊಂದು ಸಲಾಂ. ಒಂದು ವೇಳೆ ಸಾಧ್ಯವಾಗದೇ ಇದ್ದರೆ, ಉತ್ತರ ಕಂಡುಕೊಳ್ಳಲು ಈ ಲಿಂಕ್​ ಮೇಲೆ ಕ್ಲಿಕ್ಕಿಸಿ.

    ಈ ಕೆಳಗಿನ ಮತ್ತೊಂದು ಚಿತ್ರದಲ್ಲಿ ಪರಭಕ್ಷಕ ಜೀವಿಯೊಂದು ಜಿಂಕೆಯನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದೆ. ಅದನ್ನಾದರೂ ಪತ್ತೆ ಹಚ್ಚಿರಿ.

    ಇದೂ ಕೂಡ ಸಾಧ್ಯವಾಗಲಿಲ್ವಾ, ಏನೆಂದು ತಿಳಿಯಲು ಈ ಲಿಂಕ್​ ಮೇಲೆ ಕ್ಲಿಕ್ಕಿಸಿ ತಿಳಿಯಿರಿ.

    ಈ ಕೆಳಗಿನ ಚಿತ್ರದಲ್ಲಿ ಒಂದು ಬೆಕ್ಕಿದೆ. ಅರಣ್ಯದೊಳಗೆ ಇರುವ ಫಿಶಿಂಗ್​ ಬೆಕ್ಕು ಕೆರೆ ಹಾಗೂ ಕೊಳದ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಆಗಾಗ ಸ್ಮಿಮ್ಮಿಂಗ್​ಗೆ ಇಳಿಯುವ ಬೆಕ್ಕುಗಳು ಮೀನುಗಳನ್ನು ಬೇಟೆಯಾಡುತ್ತವೆ.

    ಇದನ್ನೂ ಓದಿ: ಅದ್ಧೂರಿ ಜೀವನಕ್ಕಾಗಿ ಹುಡುಗಿ ಹೆಸರಲ್ಲಿ ವಂಚಿಸಲು ತಾಯಿಗೆ ಮಗನ ಸಾಥ್: ಇವರ ಕತೆ ಕೇಳಿದ್ರೆ ಬೆರಗಾಗ್ತೀರಾ!

    ಬೆಕ್ಕನ್ನು ಪತ್ತೆ ಹಚ್ಚಲು ನಿಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ ಅಂದ್ರೆ ಉತ್ತರಕ್ಕಾಗಿ ಈ ಲಿಂಕ್​ ಮೇಲೆ ಕ್ಲಿಕ್ಕಿಸಿ.

    ಈ ಚಿತ್ರದಲ್ಲಿ ಅನೇಕ ಹುಲಿಗಳಿವೆ. ಆದರೆ ಎಷ್ಟು ಹುಲಿಗಳಿವೆ ಎಂಬುದನ್ನು ನೀವು ಪತ್ತೆ ಹಚ್ಚಬೇಕು.

    ಒಂದು ವೇಳೆ ಆಗಲಿಲ್ಲ ಎಂದರೆ ಲಿಂಕ್​​ ಮೇಲೆ ಕ್ಲಿಕ್ಕಿಸುವುದನ್ನು ಮರೆಯಬೇಡಿ.

    ಕೊನೆಯ ಚಿತ್ರವೂ ನೋಡಲು ಸರಳವಾಗಿ ಕಂಡರು ಅದರಲ್ಲಿ ಚಿರತೆ ಇರುವುದನ್ನು ಪತ್ತೆ ಹಚ್ಚಲು ಹೋಗಿ ಅನೇಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ನಿಮ್ಮ ಕೈಯಲ್ಲಿ ಅದು ಸಾಧ್ಯವಾಗುತ್ತೆ ಎನ್ನುವುದಾದರೆ ಒಮ್ಮೆ ಪ್ರಯತ್ನಿಸಿದೆ.

    ಇದನ್ನು ಓದಿ: ಕನ್ನಡಿಗರೇ ನನ್ನ ಮರಿಬೇಡ್ರಪ್ಪೋ! ಆಂಕರ್ ಅನುಶ್ರಿಗೆ ಶುರುವಾಗಿದೆ ಭಯ..

    ಸಾಧ್ಯವಾಗುವುದಿಲ್ಲ ಎಂದಾದರೆ ಉತ್ತರಕ್ಕಾಗಿ ಲಿಂಕ್​ ಮೇಲೆ ಕ್ಲಿಕ್ಕಿಸಿ.

    VIDEO: ನನ್ನ ದಾಖಲೆ ಮುರಿಯಿರಿ, ಸಚಿನ್‌ಗೆ ಯುವರಾಜ್ ಪ್ರತಿ ಸವಾಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts