ಎಣ್ಣೆ ಪಾರ್ಟಿಯಲ್ಲಿ ಲವ್​ ವಿಚಾರ ಪ್ರಸ್ತಾಪಿಸಿದ್ದಕ್ಕೆ ನಡೆದೇ ಹೋಯ್ತು ಸ್ನೇಹಿತನ ಬರ್ಬರ ಹತ್ಯೆ

Friend Murder
Published on

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊನೆಗೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕ್ಯಾತಮಾರನಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಸತೀಶ್(22) ಕೊಲೆಯಾದ ದುರ್ದೈವಿ. ಮಧು ಹಾಗೂ ಕಿರಣ್ ಎಂಬುವವರೇ ಆರೋಪಿಗಳು. ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ.

ನಿನ್ನೆ ಸ್ನೇಹಿತರ ನಡುವೆ ಎಣ್ಣೆ ಪಾರ್ಟಿ ನಡೆಯುವಾಗ ಲವ್ ವಿಚಾರ ಪ್ರಸ್ತಾಪವಾಗಿ, ಬಳಿಕ ಗಲಾಟೆಗೆ ಆರಂಭವಾಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಉದಯಗಿರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net