More

    ಮದ್ಯದ ಅಮಲಿನಿಂದ ಅತಿಯಾದ ವೇಗದಲ್ಲಿ ಕಾರು ಚಲಾಯಿಸಿ ದುರಂತ ಸಾವಿಗೀಡಾದ ವ್ಯಕ್ತಿ

    ಚಿಕ್ಕಬಳ್ಳಾಪುರ: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಮದ್ಯ ಸಿಗದೇ ಪರದಾಡಿದ್ದ ಮದ್ಯ ಪ್ರಿಯರಿಗೆ ಸೋಮವಾರದಿಂದ ಆಲ್ಕೋಹಾಲ್​ ಲಭ್ಯವಾಗುತ್ತಿದ್ದು, ತುಂಬಾ ಖುಷಿಯಾಗಿದ್ದಾರೆ. ಆದರೆ, ಗುಂಡಿನ ಮತ್ತೇ ಗಮ್ಮತ್ತು ಅಳತೆ ಮೀರಿದರೆ ಆಪತ್ತ ಎಂಬಂತೆ ಅನೇಕ ಅನಾಹುತಗಳಿಗೂ ಮದ್ಯ ದಾರಿ ಮಾಡಿಕೊಟ್ಟಿದೆ.

    ಇದನ್ನೂ ಓದಿ: ಮನೆಯ ಧೂಳು ತುಂಬಾ ಡೇಂಜರ್​: ಸಂಶೋಧನೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ

    ಚಿಕ್ಕಬಳ್ಳಾಪುರದಲ್ಲಿ ಮದ್ಯಪಾನಕ್ಕೆ ಮೊದಲ ಬಲಿಯಾಗಿದೆ. ಗೌರಿಬಿದನೂರು ತಾಲ್ಲೂಕು ಇಡಗೂರು ಗ್ರಾಮದ ನಿವಾಸಿ ವಿನೋದ್ ಗೌಡ (34) ಕಂಠಪೂರ್ತಿ ಮದ್ಯ ಸೇವಿಸಿ, ಅದರ ಮತ್ತಿನಲ್ಲಿ ಕಾರಿನಲ್ಲಿ ಬೇಕಾಬಿಟ್ಟಿ ಸುತ್ತಾಡಿ ತಮ್ಮ ಸಾವನ್ನು ತಾವೇ ತಂದುಕೊಂಡಿದ್ದಾರೆ.

    ಅತಿಯಾದ ವೇಗದಲ್ಲಿ ಕಾರು ಚಲಾಯಿಸಿ, ಮನೆಯೊಂದರ ಕಾಂಪೌಂಡ್​ಗೆ ಡಿಕ್ಕಿ ಹೊಡೆದು ವಿನೋದ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ವಿನೋದ್​ ಲಾಕ್​ಡೌನ್​ನಿಂದಾಗಿ ಗ್ರಾಮಕ್ಕೆ ಬಂದಿದ್ದ, ಆದರೆ, ಅತಿಯಾದ ಮದ್ಯ ಸೇವನೆಯಿಂದ ದುರಂತ ಸಾವಿಗೀಡಾಗಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಒಟಿಪಿ ಕೊಡದಿದ್ರೂ ಖಾತೆಗೆ ಬೀಳುತ್ತೆ ಕನ್ನ !

    ಎಚ್ಚರ ತಪ್ಪಿದರೆ ಕಂಟಕ! ಕರೊನಾ ಆತಂಕ ಉಲ್ಬಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts