More

    ಮನೆಯ ಧೂಳು ತುಂಬಾ ಡೇಂಜರ್​: ಸಂಶೋಧನೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ

    ಮನೆಯ ಹಾಸಿಗೆ, ದಿಂಬು, ಬಟ್ಟೆಗಳಲ್ಲಿರುವ ಧೂಳಿನ ಕಣಗಳಿಂದಲೇ ಶೇ.60 ಅಸ್ತಮಾ ಉಂಟಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ನಂತರದಲ್ಲಿ ಜಿರಲೆಗಳಿಂದ ಶೇ.25, ಸಾಕುಪ್ರಾಣಿಗಳ ಕೂದಲು ಮತ್ತು ಮೂತ್ರಗಳಿಂದ ಶೇ.5 ಅಸ್ತಮಾ ಉಂಟಾಗುತ್ತದೆ. ಮನೆ ಹಾಗೂ ವಸ್ತುಗಳನ್ನು ಸ್ವಚ್ಛಗೊಳಿಸುವುದು ಅಸ್ತಮಾ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

    ಇದನ್ನೂ ಓದಿ: ಒಟಿಪಿ ಕೊಡದಿದ್ರೂ ಖಾತೆಗೆ ಬೀಳುತ್ತೆ ಕನ್ನ !

    ವಾಯುಮಾಲಿನ್ಯವೂ ಪ್ರಮುಖ ಸಮಸ್ಯೆ. ಅದರಲ್ಲಿ, ಪಿಎಂ10, ಪಿಎಂ5 ಧೂಳಿನ ಕಣಗಳಿಗಿಂತಲೂ ಪಿಎಂ2.5 ಕಣಗಳು ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ. ಈ ಅತಿ ಸಣ್ಣ ಕಣಗಳು ಶ್ವಾಸಕೋಶದ ಮೂಲಕ ರಕ್ತನಾಳವನ್ನೂ ತಲುಪುತ್ತವೆ. ಗರ್ಭಿಣಿ ಈ ಕಣಗಳನ್ನು ಸೇವಿಸಿದರೆ ಮಗುವಿಗೆ ಅಸ್ತಮಾ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇಂಥ ಅಸ್ತಮಾ ಗುಣವಾಗುವುದಿಲ್ಲ, ಜೀವನ ಪೂರ್ತಿ ಔಷಧ ಸೇವಿಸಬೇಕಾಗುತ್ತದೆ ಎಂದು 2018ರ ಸಂಶೋಧನೆ ತಿಳಿಸಿದೆ. ಮಕ್ಕಳಿಗೆ ನೆಬ್ಯುಲೈಸೇಷನ್ ಕೊಡಿಸಬಾರದು. ಒಬ್ಬರು ಬಳಸಿದ ನೆಬ್ಯುಲೈಸೇಷನ್ ವಸ್ತುಗಳನ್ನೇ ಎಲ್ಲರೂ ಬಳಸುವುದು ಅಪಾಯಕಾರಿ.

    | ಡಾ. ಎಚ್. ಪರಮೇಶ್ ಮಕ್ಕಳ ಶ್ವಾಸಕೋಶ ತಜ್ಞ, ಭಾರತೀಯ ವಿಜ್ಞಾನ ಮಂದಿರದ ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್​ನಲ್ಲಿ ಪರಿಸರ ತಜ್ಞ

    ಇದನ್ನೂ ಓದಿ: ಎಚ್ಚರ ತಪ್ಪಿದರೆ ಕಂಟಕ! ಕರೊನಾ ಆತಂಕ ಉಲ್ಬಣ…

    ಮನೆಯಲ್ಲೇ ಚ್ಯವನಪ್ರಾಶ್ ತಯಾರಿಸಿಕೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts