

ಗಂಗೊಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ 74ನೇ ಹುಟ್ಟುಹಬ್ಬದ ಪ್ರಯುಕ್ತ ತ್ರಾಸಿ ರಿಕ್ಷಾ ಚಾಲಕ ಉದಯ ಖಾರ್ವಿ ಪ್ರಯಾಣಿಕರಿಗೆ ಉಚಿತ ರಿಕ್ಷಾ ಸೇವೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಉದಯ ಖಾರ್ವಿ ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಕಳೆದ ಐದು ವರ್ಷಗಳಿಂದ ಪ್ರಯಾಣಿಕರಿಗೆ ಉಚಿತ ರಿಕ್ಷಾ ಸೇವೆ ನೀಡುತ್ತಿದ್ದಾರೆ. ಸ್ಥಳೀಯ ಪ್ರದೇಶಗಳ 15 ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ರಿಕ್ಷಾ ಸೇವೆ ನೀಡುತ್ತಿದ್ದಾರೆ.
ರಾಷ್ಟ್ರ ಕಂಡ ಅಪ್ರತಿಮ ನಾಯಕನಿಗೆ ಜನಸೇವೆ ಮಾಡಲು ಮತ್ತಷ್ಟು ಅವಕಾಶ ದೊರೆಯುವಂತಾಗಲಿ ಎಂಬ ಉದ್ದೇಶದಿಂದ ಉಚಿತ ಸೇವೆ ನೀಡುತ್ತಿದ್ದೇನೆ ಎನ್ನುತ್ತಾರೆ ಉದಯ್ ಆಚಾರ್ಯ.ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.