

ಹೆಬ್ರಿ: ಗುರಿ ಇಟ್ಟುಕೊಂಡು ವಿದ್ಯಾsರ್ಥಿಗಳು ಕೆಲಸ ಮಾಡಬೇಕು. ನಡತೆಯಲ್ಲಿ ನಯ, ವಿನಯ ಇರಬೇಕು. ನಮ್ಮ ಕಾಲದಲ್ಲಿ ಬಹಳಷ್ಟು ಬಡತನ ಇದ್ದರೂ ಗೌರವಕ್ಕೆ ಕಡಿಮೆ ಇರಲಿಲ್ಲ. ಆದರೆ ಕಾಲ ಬದಲಾಗಿದೆ. ವಿಜಯವಾಣಿ ವಿದ್ಯಾರ್ಥಿ ಮಿತ್ರವನ್ನು ಓದಿ ಸಮರ್ಪಕ ಜ್ಞಾನ ಬಳಸಿಕೊಂಡು ಪಾಲಕರು ಶಾಲೆಯ ಕೀರ್ತಿ ಮೇಲಕ್ಕೆರಿಸಿ ಎಂದು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ನಾಗೇಶ್ ನಾಯಕ್ ಹೇಳಿದರು.
ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಶಾಂತಿನಿಕೇತನ ಯುವವೃಂದ ಕುಡಿಬೈಲ್ ಸಹಕಾರದೊಂದಿಗೆ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪ್ರಾಯೋಜಕತ್ವದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿತರಿಸಿ ಮಾತನಾಡಿದರು.
ಲಯನ್ಸ್ ಪ್ರಮುಖ ಟಿಜಿ ಆಚಾರ್ಯ ಮಾತನಾಡಿ, ನಿಷ್ಠೆಯಿಂದ ವ್ಯಾಸಂಗ ಮಾಡಿ ವಿದ್ಯಾರ್ಥಿಗಳು ಯಶಸ್ಸು ಗಳಿಸಬೇಕು. ವಿದ್ಯಾರ್ಥಿ ಮಿತ್ರದ ಪ್ರಯೋಜನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿ ಎಂದರು.
ಶಾಂತಿನಿಕೇತನದ ಸಂಸ್ಥಾಪಕ ರಾಜೇಶ್, ಉದ್ಯಮಿ ರಾಜೇಶ್ ನಾಯಕ್, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ, ಕಾರ್ಯದರ್ಶಿ ಹರೀಶ್ ಶೆಟ್ಟಿ ನಾಡ್ಪಾಲು, ಲಯನ್ಸ್ ಪ್ರಮುಖರಾದ ಆಶಾ ಶೆಟ್ಟಿ, ಕೃಷ್ಣ ಶೆಟ್ಟಿ, ದಾಮೋದರ ಶೆಟ್ಟಿ, ಪ್ರಾಂಶುಪಾಲರಾದ ಉಮೇಶ್, ದಿವಾಕರ ಮರಕಾಲ ಇದ್ದರು. ನರೇಂದ್ರ ಎಸ್.ಮರಸಣಿಗೆ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ಪಾಠ ಪ್ರವಚನದೊಂದಿಗೆ, ಇಂಗ್ಲಿಷ್, ಕಂಪ್ಯೂಟರ್ ಹಾಗೂ ಸಂವಹನ ಕಲೆ ಇದ್ದರೆ ಸಾಧಿಸಬಹುದು. ವಿಜಯವಾಣಿ ಉದ್ಯೋಗ ಮಿತ್ರ ಇದಕ್ಕೆಲ್ಲ ಸಹಕಾರ ನೀಡುತ್ತದೆ ಎಂದರು. -ರಾಜೇಶ್,ಶಾಂತಿನಿಕೇತನದ ಸಂಸ್ಥಾಪಕ
-ರಾಜೇಶ್,ಶಾಂತಿನಿಕೇತನದ ಸಂಸ್ಥಾಪಕ