ವಿಶ್ವಕರ್ಮರು ಜಗತ್ತಿನ ದೈವಿಕ ಅಭಿಯಂತ

vishwakrama
ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಕೃಷ್ಣಯ್ಯ ಆಚಾರ್ಯ ನೀರ್ಕೇರೆ ಉಳ್ಳೂರು ಅವರನ್ನು ಸನ್ಮಾನಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ವಿಶ್ವಕರ್ಮರನ್ನು ಪ್ರಪಂಚದ ದೈವಿಕ ಅಭಿಯಂತ ಎಂದು ಕರೆಯಲಾಗುತ್ತದೆ. ಅವರು ವಾಸ್ತುಶಿಲ್ಪಿಗಳ ಪ್ರಧಾನ ದೇವರು. ಕರಕುಶಲತೆಯನ್ನು ಜಗತ್ತಿಗೆ ಪರಿಚಯಿಸಿದವರು ಎಂದು ಬೈಂದೂರು ತಾಪಂ ಇಒ ಭಾರತಿ ಎನ್. ಹೇಳಿದರು.

ಬೈಂದೂರು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಹಸೀಲ್ದಾರ್ ಪ್ರದೀಪ್ ಆರ್. ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಕೆ. ನಾಯ್ಕ, ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ, ಮೊಕ್ತೇಸರ ಚಿತ್ತೂರು ಪ್ರಭಾಕರ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಆಚಾರ್ಯ ನಾವುಂದ, ಬೈಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ನಾರಾಯಣ ಆಚಾರ್ಯ ಮಾವುಡ, ಬೈಂದೂರು ವಿಶ್ವಕರ್ಮ ಯುವಕ ಸಂಘ ಅಧ್ಯಕ್ಷ ನಾಗರಾಜ ವೆಂಕರಮಣ ಆಚಾರ್ಯ ಬಂಕೇಶ್ವರ, ಮರವಂತೆ ವಿಶ್ವಕರ್ಮ ಸಂಘ ಉಪಾಧ್ಯಕ್ಷ ಶ್ರೀಧರ್ ಆಚಾರ್ಯ ಮರವಂತೆ, ಕುಂದಾಪುರ ಬೈಂದೂರು ತಾಲೂಕು ಕಾರ್ಪೊರೇಟರ್ ಯೂನಿಯನ್ ಅಧ್ಯಕ್ಷ ಮಹೇಶ್ ಆಚಾರ್ಯ ಉಪ್ಪುಂದ ಇದ್ದರು. ನಾಗರಾಜ ಆಚಾರ್ಯ ಬಿಜೂರು ವಂದಿಸಿದರು. ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಪಿಎಂ ವಿಶ್ವಕರ್ಮದ ಮಾಹಿತಿ

ಕುಲುಮೆ ಕೆಲಸ ಮಾಡುತ್ತಿರುವ ಕೃಷ್ಣಯ್ಯ ಆಚಾರ್ಯ ನೀರ್ಕೇರೆ ಉಳ್ಳೂರು ಅವರನ್ನು ಸನ್ಮಾನಿಸಲಾಯಿತು. ಪಿಎಂ ವಿಶ್ವಕರ್ಮ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್. ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net