ಸಾಮಾಜಿಕ ಜಾಲತಾಣ ಉಪಯೋಗಿಸಿ ಹಣ ಲೂಟಿ

cyber crime
Published on

ಕುಂದಾಪುರ: ಬ್ಯಾಂಕ್‌ನಿಂದ ಇನ್‌ಸ್ಟಾಟ್ ಲೋನ್ ಮಾಡಿಸಿ ಸಾಮಾಜಿಕ ಜಾಲತಾಣ ಉಪಯೋಗಿಸಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿದ ಘಟನೆ ನಡೆದಿದೆ.
ಕುಂದಾಪುರ ತಾಲೂಕಿನ ಹಂಗಳೂರು ನಿವಾಸಿ ಭವಿಷ್ಯ ಎ. ಹಣ ಕಳೆದುಕೊಂಡ ಮಹಿಳೆ. ಭವಿಷ್ಯ ಎಂಬುವರು ಸೆ.21ರಂದು ಹಂಗಳೂರಿನ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಬೆಳಗ್ಗೆ ಇವರ ಮೊಬೈಲ್‌ಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಪೆಡೆಕ್ಸ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಆಧಾರ್ ನಂಬರ್‌ನಿಂದ ಮುಂಬೈಯಿಂದ ಇರಾನ್‌ಗೆ ಒಂದು ಪಾರ್ಸೆಲ್ ಹೋಗುತ್ತಿದ್ದು ಅದರಲ್ಲಿ 5 Expired Iran Passport, 3 Credit Card, 2Kg Cloth, 1 Laptop and 50 Gms MDMA ಇರುವುದಾಗಿ ಈ ಬಗ್ಗೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ನೀವು ಕೂಡ ಸೈಬರ್ ಕ್ರೈಂ ದೂರು ನೀಡುವಂತೆ ತಿಳಿಸಿ ಮುಂಬೈ ಕ್ರೈಂ ಬ್ರಾಂಚ್‌ಗೆ ಕರೆ ಕನೆಕ್ಟ್ ಮಾಡುವುದಾಗಿ ಹೇಳಿ ಕರೆಯನ್ನು ಕನೆಕ್ಟ್ ಮಾಡಿದ್ದು, ಆಗ ಓರ್ವ ಮಹಿಳೆ ಸೈಬರ್ ಕ್ರೈಂ ಅಧಿಕಾರಿ ಎಂದು ಹೇಳಿ ಮಾತನಾಡಿ ಪಿರ್ಯಾದಿದಾರರ ಆಧಾರ ಕಾರ್ಡ್ ಹಾಗೂ ಇತ್ಯಾದಿ ವಿವರಗಳನ್ನು Skype APP ಮುಖಾಂತರ ಕಳಿಹಿಸುವಂತೆ ತಿಳಿಸಿ ಆಧಾರ ಕಾರ್ಡನ್ನು ಪಡೆದು ಸದ್ರಿ ಆಧಾರ್ ನಂಬರ್‌ನಿಂದ 25 ಬ್ಯಾಂಕ್ ಅಕೌಂಟ್ ಇದ್ದು ನಿಮ್ಮ ಐಸಿಐಸಿ ಬ್ಯಾಂಕ್ ಖಾತೆಯಿಂದ ಮನಿಲ್ಯಾಂಡರಿಂಗ್ ಆಗುತ್ತಿರುವುದಾಗಿ ಹೇಳಿ ಸದ್ರಿ ಅಕೌಂಟ್‌ನಿಂದ ಇನ್‌ಸ್ಟಾಂಟ್ ಲೋನ್ ಮಾಡಿದರೆ ನಿಮಗೆ ಫ್ರಾಡ್ ಮಾಡಿದ ವ್ಯಕ್ತಿಗಳನ್ನು ಟ್ರೇಸ್ ಮಾಡಬಹುದು ಎಂದು ಹೇಳಿ ಭವಿಷ್ಯ ಅವರ ಐಸಿಐಸಿ ಬ್ಯಾಂಕ್‌ನ ಖಾತೆಯಿಂದ ಕೂಡಲೇ ಇನ್‌ಸ್ಟಾಂಟ್ ಲೋನ್ ಮಾಡಿಸಿ 8,78,760 ರೂ. ಹಣವನ್ನು ಭವಿಷ್ಯ ಅವರ ಖಾತೆಗೆ ಜಮಾ ಮಾಡಿಸಿ ನಂತರ ಆರೋಪಿತರು ಸಾಮಾಜಿಕ ಜಾಲತಾಣ ಉಪಯೋಗಿಸಿಕೊಂಡು ಪಿರ್ಯಾದಿದಾರರ ಐಸಿಐಸಿ ಬ್ಯಾಂಕ್ ಖಾತೆಯಲ್ಲಿದ್ದ 8,87,307.91 ರೂ. ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net