

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪ್ರಪಂಚಾದ್ಯಂತ ಇರುವ ಪಾರಂಪರಿಕ ಕಲೆ, ಕೆತ್ತನೆ, ಇತಿಹಾಸ ಮತ್ತು ಪರಂಪರೆ ಗಮನಿಸಿದಾಗ ತತ್ಕ್ಷಣಕ್ಕೆ ವಿಶ್ವಕರ್ಮ ದೇವರ ನೆನಪಾಗುತ್ತದೆ. ಅದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಹಿಂದುಳಿದ ಸಮುದಾಯಗಳ ಜನರ ಅಭಿವೃದ್ಧಿಗೆ ಪಿ.ಎಂ. ವಿಶ್ವಕರ್ಮ ಎಂಬ ವಿಶೇಷ ಯೋಜನೆ ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಮಂಗಳವಾರ ತಾಲೂಕು ಮಟ್ಟದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವೈದಿಕ ವಿದ್ವಾಂಸ ಸುದರ್ಶನ್ ಪುರೋಹಿತ್ ಪಡುಬಿದ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ವಿಶ್ವಕರ್ಮ ಸಮಾಜದ ಸಾಧಕ ಪ್ರತಿಭೆಗಳಾದ ಪ್ರಭಾಕರ ಆಚಾರ್ಯ ಮೂಡುಬೆಳ್ಳೆ, ಉಮೇಶ್ ಆಚಾರ್ಯ ಕೋತಲಕಟ್ಟೆ, ಅಖಿಲೇಶ್ ಆಚಾರ್ಯ ಸುಭಾಸ್ನಗರ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಪ್ರತಿಭಾ ಆರ್.ಅಧ್ಯಕ್ಷತೆ ವಹಿಸಿದ್ದರು. ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮುರಹರಿ ಕೆ.ಆಚಾರ್ಯ ಉಡುಪಿ, ದ.ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಕಾಪು ವಿಶ್ವ ಬ್ರಾಹ್ಮಣ ಯುವ ಸಂಘಟನೆ ಅಧ್ಯಕ್ಷ ಸುಧಾಕರ ಆಚಾರ್ಯ ಬಿಳಿಯಾರು, ತಾಪಂ ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ. ಉಪಸ್ಥಿತರಿದ್ದರು. ಗಣೇಶ್ ಆಚಾರ್ಯ ಉಚ್ಚಿಲ ಸ್ವಾಗತಿಸಿ, ರಾಜೇಶ್ ಆಚಾರ್ಯ ಬಿಳಿಯಾರು ಕಾರ್ಯಕ್ರಮ ನಿರೂಪಿಸಿದರು. ತೃಷಾ ಆಚಾರ್ಯ ಕಾಪು ವಂದಿಸಿದರು.